ಅಂತರಾಷ್ಟ್ರೀಯ

ಪಾಕ್‌ನಲ್ಲಿರುವ ಗೀತಾಳನ್ನು ಕರೆತರಲು ಅಗತ್ಯ ಕ್ರಮ: ಸಚಿವೆ ಸುಷ್ಮಾ ಭರವಸೆ

Pinterest LinkedIn Tumblr

geetha

ಕರಾಚಿ/ಹೊಸದಿಲ್ಲಿ : ದಶಕದ ಹಿಂದೆ ಆಕಸ್ಮಿಕವಾಗಿ ಗಡಿ ದಾಟಿ ಪಾಕಿಸ್ತಾನ ಸೇರಿದ ಮಾತುಬಾರದ ಭಾರತದ ಯುವತಿ ಗೀತಾಳನ್ನು ಸ್ವದೇಶಕ್ಕೆ ಕರೆತರುವ ಪ್ರಕ್ರಿಯೆ ಮುಂದುವರಿದಿದೆ. ಇದಕ್ಕಾಗಿ ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

ತನ್ನ 11ನೇ ವಯಸ್ಸಿನಲ್ಲಿ ಪಾಕ್ ಗಡಿ ಪ್ರವೇಶಿಸಿದ್ದ ಗೀತಾಳಿಗೆ ಈಗ 20 ವರ್ಷ. ಸದ್ಯ ಕರಾಚಿಯ ಈದಿ ಫೌಂಡೇಶನ್ ನಡೆಸುತ್ತಿರು ಅನಾಥಶ್ರಮದಲ್ಲಿದ್ದಾಳೆ. ಕಳೆದ ಕೆಲವು ದಿನಗಳಿಂದ ಪಂಜಾಬ್, ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶದ ನಾಲ್ಕು ಕುಟುಂಬಗಳು ಗೀತಾಳನ್ನು ತಮ್ಮ ಮಗಳೆಂದು ಹೇಳಿಕೊಂಡಿವೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ ಎಂದು ಸುಷ್ಮಾ ಶನಿವಾರ ಟ್ವೀಟ್ ಮಾಡಿದ್ದಾರೆ.

ಸಂಕೇತಗಳ ಮೂಲಕ ಸಂವಹನ: ತನಗೆ ಏಳು ಮಂದಿ ಸಹೋದರ ಮತ್ತು ಸಹೋದರಿಯರಿದ್ದರು. ತಾನು ತಂದೆಯ ಜತೆ ದೇವಾಲಯಕ್ಕೆ ಹೋಗುತ್ತಿದ್ದೆ ಎಂದು ಗೀತಾ ತನ್ನನ್ನು ಭೇಟಿ ಮಾಡಿದ ಭಾರತದ ಹೈ ಕಮಿಷನರ್ ಟಿ.ಸಿ.ಎ. ರಾಘವನ್ ಅವರಿಗೆ ಸಂಕೇತಗಳ ಮೂಲಕ ವಿವರಿಸಿದ್ದಾಳೆ. ಬಳಿಕ ‘ವೈಷ್ಣೋದೇವಿ’ ಎಂದು ಬರೆದಿದ್ದಾಳೆ. ಈ ಎಲ್ಲಾ ಮಾಹಿತಿಗಳ ಆಧಾರದ ಮೇಲೆ ಗೀತಾ ಕುಟುಂಬ ಸದಸ್ಯರನ್ನು ಪತ್ತೆ ಮಾಡಲು ನೆರವಾಗಿ ಎಂದು ಸುಷ್ಮಾ ಅವರು ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ. ”ಅದೊಂದು ಹಳ್ಳಿ. ಮನೆ ಮುಂದೆ ನಂ.193 ಎಂಬ ಬೋರ್ಡಿತ್ತು. ಪಕ್ಕದಲ್ಲೊಂದು ಕೆರೆ, ಭತ್ತದ ಗದ್ದೆ, ಹೆರಿಗೆ ಆಸ್ಪತ್ರೆಯೊಂದಿದೆ,” ಎಂದೂ ಆಕೆ ಚಿತ್ರದ ಮೂಲಕ ವಿವರಿಸಿದ್ದಾಳೆ ಎಂದೂ ಸಚಿವರು ಹೇಳಿದ್ದಾರೆ.

Write A Comment