ಮುಂಬೈ

ವಿಜಯ್ ಮಲ್ಯ ಖಾಸಗಿ ವಿಮಾನ ಗುಜುರಿಗೆ

Pinterest LinkedIn Tumblr

king

ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿಂತುಹೋಗಿದ್ದ ಮದ್ಯ ದೊರೆ ವಿಜಯ್ ಮಲ್ಯ ಅವರ 11 ಆಸನದ ಖಾಸಗಿ ಕಿಂಗ್ ಫಿಶರ್ ಏರ್ಲೈನ್ಸ್ ವಿಮಾನವನ್ನು ಬಾಕಿ ವಸೂಲಾತಿಗಾಗಿ ಹರಾಜು ಮಾಡಲಾಗಿದೆ.

ಮುಂಬೈ ಮೂಲದ ಪತ್ರಿಕೆಯೊಂದರ ಪ್ರಕಾರ ಈ ವಿಮಾನವನ್ನು ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ 22 ಲಕ್ಷಕ್ಕೆ ಹರಾಜು ಹಾಕಿದೆ. ಇದನ್ನು ಕೊಂಡುಕೊಂಡಿರುವ ಸೈಲೆಂಟ್ ಎಂಟರ್ ಪ್ರೈಸಸ್, ವಿಮಾನದ ಹಲವು ಭಾಗಗಳನ್ನು ಮಾರಿ ವ್ಯಯಿಸಿದ ಹಣವನ್ನು ಹಿಂಪಡೆಯುತ್ತದೆ ಎನ್ನಲಾಗಿದೆ.

ವಿಮಾನವನ್ನು ಬಿಚ್ಚಿ, ಭಾಗಗಳನ್ನು ವಿಂಗಡಿಸುವ ಕಾರ್ಯ ಪ್ರಗತಿಯಲ್ಲಿದೆ. 8 ದಿನಗಳಿಂದ ಈ ಕೆಲಸ ಅವ್ಯಾಹತವಾಗಿ ನಡೆಯುತ್ತಿದ್ದು ಇನ್ನೊಂದು ವಾರದಲ್ಲಿ ಈ ಕೆಲಸ ಮುಗಿಯಲಿದೆ ಎನ್ನಲಾಗಿದೆ.

ಬಹು ಕೋಟಿಗಳ ನಷ್ಟ ಅನುಭವಿಸಿದ್ದ ಕಿಂಗ್ ಫಿಶರ್ ಏರ್ಲೈನ್ಸ್ ತನ್ನ ನೌಕರರಿಗೆ ವೇತನ ಕೂಡ ನೀಡಿರಲಿಲ್ಲ. ಆದುದರಿಂದ ಇದರ ಪರವಾನಗಿಯನ್ನು ರದ್ದುಪಡಿಸಲಾಗಿತ್ತು. ಮುಂಬೈನ ವೈಲ್ಸ್ ಪಾರ್ಲೆಯಲ್ಲಿರುವ 100 ಕೋಟಿ ಬೆಲೆ ಬಾಳುವ ಕಿಂಗ್ ಫಿಶರ್ ಮನೆಯನ್ನು ಕೂಡ ಮಲ್ಯ ಕಳೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

Write A Comment