ಮುಂಬೈ

4 ವರ್ಷಗಳಲ್ಲಿ 3 ಬಾರಿ ರೈಲು ಅಪಘಾತದಲ್ಲಿ ಸಿಲುಕಿದರೂ ಬಚಾವಾದ ಅದೃಷ್ಟವಂತ !

Pinterest LinkedIn Tumblr

6194Mansoorಮುಂಬೈ: ಅದೃಷ್ಟ ಗಟ್ಟಿಯಿದ್ದರೆ ಬಂಡೆ ತಲೆ ಮೇಲೆ ಬಿದ್ದರೂ ಏನಾಗುವುದಿಲ್ಲವೆಂದು ಹೇಳುತ್ತಾರೆ. ಇಲ್ಲೊಬ್ಬ ವ್ಯಕ್ತಿ ಕಳೆದ ನಾಲ್ಕು ವರ್ಷಗಳಲ್ಲಿ ಮೂರು ಬಾರಿ ರೈಲು ಅಪಘಾತದಲ್ಲಿ ಸಿಲುಕಿದರೂ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮುಂಬೈನ ಮೀರಾ ರೋಡ್ ನಿವಾಸಿ 30 ವರ್ಷದ ಮಹಮ್ಮದ್ ಫರೀದ್ ಮನ್ಸೂರ್ ಎಂಬಾತನೇ ಆ ಅದೃಷ್ಟವಂತ ವ್ತಕ್ತಿಯಾಗಿದ್ದು, ಈತ ಪ್ರಯಾಣಿಸುತ್ತಿದ್ದ ರೈಲು ಎರಡು ಬಾರಿ ಅಪಘಾತಕ್ಕೊಳಗಾಗಿದ್ದರೆ ಒಮ್ಮೆ ಕಿಕ್ಕಿರಿದು ತುಂಬಿದ್ದ ರೈಲಿನಿಂದ ಆಕಸ್ಮಿಕವಾಗಿ ಹೊರಗೆ ಬಿದ್ದಿದ್ದರೂ ಸಣ್ಣ ಪುಟ್ಟ ಗಾಯಗಳೊಂದಿಗೆ ಜೀವಾಪಾಯದಿಂದ ಪಾರಾಗಿದ್ದಾರೆ.

ಮಹಮ್ಮದ್ ಫರೀದ್ ಮನ್ಸೂರ್ ಅವರ ಅಂಗಡಿ ಕೊಲಾಬಾ ಪ್ರದೇಶದಲ್ಲಿರುವ ಕಾರಣ ಇವರು ಪ್ರತಿ ದಿನವೂ ಮುಂಬೈ ಲೋಕಲ್ ರೈಲಿನಲ್ಲಿ ಪ್ರಯಾಣಿಸುವುದು ಅನಿವಾರ್ಯವಾಗಿದ್ದು, ದಿನ ನಿತ್ಯವೂ ಇವರು ರೈಲಿಗೆ ಹೋಗುವಾಗ ಕುಟುಂಬ ಸದಸ್ಯರು ದುಗುಡದಿಂದಲೇ ಬೀಳ್ಕೊಡುತ್ತಾರಂತೆ.

Write A Comment