ರಾಷ್ಟ್ರೀಯ

ಸಾವು ಹೀಗೂ ಬರಬಹುದು ನೋಡಿ..!

Pinterest LinkedIn Tumblr

4867Ball-zoomಕೋಲ್ಕತ್ತಾ: ಸಾವು ಯಾವ ರೂಪದಲ್ಲಿ ಹಾಗೂ ಯಾವ ವೇಳೆ ಬರುತ್ತದೋ ಎಂಬುದರ ಅರಿವು ಯಾರಿಗೂ ಇರುವುದಿಲ್ಲ. ಆದರೆ ಈ ಯುವಕನಿಗೆ ಬಂದ ಸಾವು ಮಾತ್ರ ನಿಜಕ್ಕೂ ದುರಂತ.

ತನ್ನ ಮುದ್ದು ನಾಯಿ ಮರಿಯೊಂದಿಗೆ ಕೆಂಪು ಬಣ್ಣದ ಚೆಂಡಿನ ಜೊತೆ ಆಟವಾಡುತ್ತಿದ್ದ 27 ವರ್ಷದ ಬಿ.ಬಿ.ಎ. ಪದವೀಧರ ತನ್ನ ನಾಯಿಗೆ ಚೆಂಡನ್ನು ಕಚ್ಚಿಕೊಂಡು ಬರುವುದರ ಟ್ರೈನಿಂಗ್ ನೀಡಲು ಮುಂದಾಗಿದ್ದಾನೆ.

ಇದಕ್ಕಾಗಿ ಕೆಂಪು ಬಣ್ಣದ 1.5 ಇಂಚಿನ ಸುತ್ತಳತೆಯ ಬಾಲನ್ನು ತನ್ನ ಹಲ್ಲಿನಲ್ಲಿ ಕಚ್ಚಿಕೊಂಡು ತನ್ನ ಮುದ್ದಿನ ನಾಯಿ ಮರಿಗೆ ತೋರಿಸುತ್ತಿದ್ದ ವೇಳೆ ಆಕಸ್ಮಿಕವಾಗಿ ಆತನ ಬಾಯೊಳಗೆ ಚೆಂಡು ಹೋಗಿದೆ. ಇದರಿಂದಾಗಿ ಉಸಿರಾಡಲು ಕಷ್ಟವಾಗಿ ನೋಡನೋಡುತ್ತಿದ್ದಂತೆಯೇ ಸಾವನ್ನಪ್ಪಿದ್ದಾನೆ. ಈಗ ಯುವಕನ ಕುಟುಂಬಸ್ಥರ ರೋದನ ಮುಗಿಲು ಮುಟ್ಟಿದೆ.

Write A Comment