ಕರ್ನಾಟಕ

ಬುಲೆಟ್ ಜಾಸ್ತಿ ಸೌಂಡ್ ಮಾಡಿದ್ರೆ ಬೀಳುತ್ತೆ ಫೈನ್..!

Pinterest LinkedIn Tumblr

449Royal-Enfield-Bulletಬೆಂಗಳೂರು: ಬುಲೆಟ್ ಓಡಿಸುವುದು ಈಗಿನ ಯುವ ಜನತೆಯ ಫ್ಯಾಷನ್ ಆಗಿದ್ದು, ಈಗ ಅದರ ಶಬ್ದವೇ ಬುಲೆಟ್ ಮಾಲೀಕರಿಗೆ ಪೀಕಲಾಟಕ್ಕೆ ತಂದೊಡ್ಡಿದೆ.

ಆರ್.ಟಿ.ಓ. ಅಧಿಕಾರಿಗಳು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದ ಸುಮಾರು 14 ಕ್ಕೂ ಅಧಿಕ ಬುಲೆಟ್ ಗಳನ್ನು ಸೀಜ್ ಮಾಡಿದರಲ್ಲದೇ ದಂಡವನ್ನೂ ವಸೂಲಿ ಮಾಡಿದ್ದಾರೆ. ಶಬ್ದವನ್ನು ಕಡಿಮೆ ಮಾಡಿಸುವಂತೆ ವಾಹನ ಮಾಲೀಕರಿಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.

ಬುಲೆಟ್ ಗಾಡಿಗಳು ಅದರ ಶಬ್ದದ ಕಾರಣಕ್ಕೇ ಹೆಚ್ಚು ಆಕರ್ಷಣೀಯವಾಗಿದ್ದು, ಇದೀಗ ಆ ಕಾರಣಕ್ಕಾಗಿಯೇ ದಂಡಕ್ಕೆ ಗುರಿಯಾಗುತ್ತಿರುವುದು ಬುಲೆಟ್ ಮಾಲೀಕರಿಗೆ ಸಂಕಷ್ಟ ತಂದೊಡ್ಡಿದೆ. ಈ ಶಬ್ದವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಈಗ ವಾಹನ ಮಾಲೀಕರು ಗ್ಯಾರೇಜುಗಳಿಗೆ ಎಡತಾಕುತ್ತಿದ್ದಾರೆ.

Write A Comment