ಕರ್ನಾಟಕ

ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಚಿನ್ನದ ಪಲ್ಲಕ್ಕಿ ಸಮರ್ಪಣೆ

Pinterest LinkedIn Tumblr

ಮಂಗಳೂರು / ಸುರತ್ಕಲ್ / ಕಟೀಲು: ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತ ಚಿನ್ನದ ಪಲ್ಲಕ್ಕಿಯನ್ನು ಕಟೀಲಿನಿಂದ ವೈಭವದ ಮೆರವಣಿಗೆಯಲ್ಲಿ ಕೊಂಡೊಯ್ದು ಶಿಬರೂರು ದೈವಸ್ಥಾನದಲ್ಲಿ ಸಮರ್ಪಿಸಲಾಯಿತು.

ಜೀರ್ಣೋದ್ಧಾರಗೊಂಡ ದೈವಸ್ಥಾನದಲ್ಲಿ ಬ್ರಹ್ಮಕಲಶಾಭಿಷೇಕ ನಡೆಯಲಿದ್ದು, ನೂತನ ಚಿನ್ನ ಪಲ್ಲಕ್ಕಿಯನ್ನು ಭಕ್ತಾದಿಗಳ ಸಹಕಾರದಿಂದ ನಿರ್ಮಿಸಲಾಗಿದೆ. ಸುಮಾರು ಎರಡು ಕೆಜಿಯಷ್ಟು ಬಂಗಾರವನ್ನು ಭಕ್ತಾದಿಗಳೇ ನೀಡಿದ್ದಾರೆ.

ಕಟೀಲಿನಿಂದ ಶಿಬರೂರಿಗೆ ನಡೆದ ಮೆರವಣಿಗೆಗೆ ಪಲಿಮಾರು ಶ್ರೀ ವಿದ್ಯಾಧೀಶ ಸ್ವಾಮೀಜಿ, ವೇದವ್ಯಾಸ ತಂತ್ರಿ ಕಟೀಲಿನ ಅಸ್ರಣ್ಣರು, ಕೊಡೆತ್ತೂರು ಗುತ್ತು ಸನತ್ ಕುಮಾರ್ ಶೆಟ್ಟಿ, ಜೀರ್ಣೋದ್ದಾರ ಮತ್ರು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಏಳಿಂಜೆ ಕೋಂಜಾಲುಗುತ್ತು ಪ್ರಭಾಕರ ಶೆಟ್ಟಿ, ಗುತ್ತಿನಾರ್ ಉಮೇಶ್ ಎನ್ ಶೆಟ್ಟಿ, ಬ್ರಹ್ಮಕಲಶೋತ್ಸವ ಮತ್ತು ಜೀಣೋದ್ದಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಶಿಬರೂರು-ಅತ್ತೂರು ಕೊಡೆತ್ತೂರು ಗ್ರಾಮಸ್ಥರು ಉಪಸ್ಥಿತರಿದ್ದರು.

Comments are closed.