ಕರಾವಳಿ

ಲೋಕಸಭಾ ಚುನಾವಣೆ ಹಿನ್ನೆಲೆ: ಕುಂದಾಪುರ ಉಪವಿಭಾಗ, ಗುಜರಾತ್ ಪೊಲೀಸರಿಂದ ನಗರದಲ್ಲಿ ಪಥಸಂಚಲನ

Pinterest LinkedIn Tumblr

ಕುಂದಾಪುರ: ಲೋಕಸಭಾ ಚುನಾವಣೆ ಹಿನ್ನೆಲೆ ಶಾಂತಿ-ಸುವ್ಯವಸ್ಥೆ ಕಾಪಾಡುವ ಸಲುವಾಗಿ ಹಾಗೂ ನಿರ್ಭೀತಿಯಿಂದ ಚುನಾವಣೆ ನಡೆಸುವ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಲು ಕುಂದಾಪುರ ಉಪವಿಭಾಗದ ಪೊಲೀಸರು ಹಾಗೂ ಗುಜರಾತ್ ರಾಜ್ಯದ ಮೀಸಲು ಪಡೆ ಪೊಲೀಸರು ಕುಂದಾಪುರ ನಗರದಲ್ಲಿ ಪಥಸಂಚಲನ ನಡೆಸಿದರು.

ಗುಜರಾತ್ ಮೀಸಲು ಪಡೆ ಇನ್ಸ್‌ಪೆಕ್ಟರ್ ಆಶೀಶ್ ವಾಸವ್ ಮತ್ತು ಮೂವರು ಸಬ್ ಇನ್ಸ್‌ಪೆಕ್ಟರ್, ಕುಂದಾಪುರ ಡಿವೈಎಸ್ಪಿ ಕೆ.ಯು ಬೆಳ್ಳಿಯಪ್ಪ ನೇತೃತ್ವದಲ್ಲಿ, ಪೊಲೀಸ್ ನಿರೀಕ್ಷಕ ನಂದಕುಮಾರ್, ವೃತ್ತ ನಿರೀಕ್ಷಕ ಜಯರಾಮ ಗೌಡ ಅವರ ಉಪಸ್ಥಿತಿಯಲ್ಲಿ ಉಪವಿಭಾಗ ವ್ಯಾಪ್ತಿಯ ಕುಂದಾಪುರ ನಗರ ಠಾಣೆ, ಸಂಚಾರಿ ಠಾಣೆ, ಗ್ರಾಮಾಂತರ ಠಾಣೆ, ಬೈಂದೂರು, ಗಂಗೊಳ್ಳಿ, ಅಮಾಸೆಬೈಲು, ಶಂಕರನಾರಾಯಣ, ಕೊಲ್ಲೂರು ಠಾಣೆ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳು ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿ ನ್ಯಾಯಯುತ-ನಿರ್ಭೀತ ಚುನಾವಣೆ ನಡೆಸುವ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಿದರು.

Comments are closed.