ಕರ್ನಾಟಕ

ಬೆಂಗಳೂರಿನಲ್ಲಿ ಮೆಟ್ರೋ ಡಬಲ್ ಡೆಕ್ಕರ್ ಪ್ಲೈಒವರ್ ಕಾಮಗಾರಿ ವೇಳೆ ತುಂಡಾಗಿ ಬಿದ್ದ ಯಂತ್ರ; ಕಾರ್ಮಿಕರು ಪಾರು

Pinterest LinkedIn Tumblr

ಬೆಂಗಳೂರು: ಬೆಂಗಳೂರು ಮೆಟ್ರೋದ ಆರ್.ವಿ ರಸ್ತೆ- ಬೊಮ್ಮಸಂದ್ರ ಮಾರ್ಗದ ಡಬಲ್ ಡೆಕ್ಕರ್ ಪ್ಲೈ ಓವರ್ ನಿರ್ಮಾಣ ವೇಳೆಯಲ್ಲಿ ಅವಘಡ ನಡೆದಿದೆ. ಬಿಟಿಎಂ ಲೇಔಟ್ ಬಳಿ ಭಾನುವಾರ ಬೆಳಿಗ್ಗೆ ಸೆಗ್ಮೆಂಟ್ಸ್ ಜೋಡಣೆ ವೇಳೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಹುದೊಡ್ಡ ಯಂತ್ರವು ಸುಮಾರು 50 ಅಡಿ ಎತ್ತರದಿಂದ ಕೆಳಗೆ ಬಿದ್ದಿದೆ.

ಮೆಟ್ರೋ ಸೆಗ್ಮೆಂಟ್ಸ್ ಜೋಡಿಸುವ ಯಂತ್ರ ಅರ್ಧಕ್ಕೆ ಕಟ್ ಆಗಿ ಬೆಳಗ್ಗೆ 6-30 ರ ಸುಮಾರಿಗೆ ಕ್ರೇನ್ ಕೆಳಗೆ ಬಿದಿದ್ದು, ಕರ್ತವ್ಯ ನಿರತ ನೂರಾರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೆಟ್ರೋ ಕಾಮಗಾರಿ ವೇಳೆ ಅಸಂಬಲ್ ಜೋಡಿಸುವಾಗ 260 ಟನ್ ನ ಲಾಂಚಿಂಗ್ ಗಿರ್ಡರ್ ಎಂಬ ಬೃಹತ್ ಯಂತ್ರವು ದಿಢೀರ್ ಕುಸಿದು ಕೆಳಗೆ ಬಿದಿದ್ದು, ಅರ್ಧಕ್ಕೆ ಕಟ್ ಆಗಿದೆ. ಹಿಂದೂಸ್ತಾನ್ ಕನ್ ಸ್ಟ್ರಕ್ಷನ್ ಲಿಮಿಟೆಡ್ ಮತ್ತು ಯುಆರ್ ಸಿ ಕನ್ ಸ್ಟ್ರಕ್ಷನ್ ಪ್ರೈ.ಲಿಮೆಟೆಡ್ ಸಹಭಾಗಿತ್ವದಲ್ಲಿ ಈ ಕಾಮಗಾರಿ ನಡೆಯುತ್ತಿದೆ.

 

Comments are closed.