ಕರ್ನಾಟಕ

ಹೈ ಡೋಸ್ ಇಂಜೆಕ್ಷನ್ ನೀಡಿ ಕೊಲೆ ಮಾಡಿದ ಪತಿ- ಹತ್ತು ತಿಂಗಳ ನಂತರ ಸತ್ಯ ಬಯಲಿಗೆ

Pinterest LinkedIn Tumblr

ದಾವಣಗೆರೆ: ರೋಗಿಗಳಿಗೆ ಚುಚ್ಚುಮದ್ದು ನೀಡಿ ಜೀವ ಉಳಿಸುವ ವೈದ್ಯನೋರ್ವ ತನ್ನ ಮಡದಿಗೆ ಹೈಡೋಸ್ ಇಂಜೆಕ್ಷನ್ ನೋಡಿ ಕೊಲೆಗೈದಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ನಡೆದಿದೆ.

ಶಿಲ್ಪಾ(36) ಮೃತ ಮಹಿಳೆ. ಚನ್ನೇಶಪ್ಪ (45) ಶಿಲ್ಪಾಳನ್ನು ಕೊಲೆ ಮಾಡಿದ ಪತಿ. ಕಳೆದ ಹತ್ತು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಶಿಲ್ಪಾಳ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಡಾ. ಚನ್ನೇಶಪ್ಪ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.

ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಶಿಲ್ಪಾ ಜೊತೆ 2005ರಲ್ಲಿ ವಿವಾಹ ನೆರವೇರಿತ್ತು. ಇಬ್ಬರು ಮಕ್ಕಳಿದ್ದು, ಆರೋಪಿ ಡಾ.ಚನ್ನೇಶಪ್ಪ ಬೆಳಗುತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವಾಗ ಶಿಲ್ಪಾಳನ್ನು ಮದುವೆಯಾಗಿದ್ದನು. ಮೂಢನಂಬಿಕೆ ಹಾಗೂ ಮದ್ಯ, ಜೂಜು ವಾಮಾಚಾರಗಳಲ್ಲಿ ತೊಡಗಿದ್ದ. ಚನ್ನೇಶಪ್ಪ ಪತ್ನಿ ಶಿಲ್ಪಾಗೆ ಫೆಬ್ರವರಿ 11ರಂದು ರಕ್ತದೊತ್ತಡದಲ್ಲಿ ತೀವ್ರ ಇಳಿಕೆ ಕಂಡುಬಂದಿತ್ತಂತೆ.

ಪತ್ನಿಗೆ ಹೆಕ್ಸಾಮೆಟಜೋನ್ ಸ್ಪಿರಾಯಡ್ ಹೈಡೋಸ್ ನೀಡಿ ಕೊಲೆಗೈದಿದ್ದಾನೆ. ಬಳಿಕ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪಿದ್ದಾಳೆ ಎಂದು ಆರೋಪಿ ವೈದ್ಯ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾನೆ. ಈ ವೇಳೆ ಶವವನ್ನು ಆಸ್ಪತ್ರೆಗೆ ಕೊಂಡೊಯ್ಯುವ ಬದಲು ಮನೆಗೆ ತಂದಿದ್ದಾ ವೈದ್ಯ ಚನ್ನೇಶಪ್ಪ ಮೇಲೆ ಶಿಲ್ಪಾಳ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಿಲ್ಪಾಳ ಎಡ ಭುಜದ ಮೇಲೆ ಚುಚ್ಚುಮದ್ದಿನ ಗುರುತು ಪತ್ತೆಯಾಗಿದ್ದು, ಬಾಯಿಂದ ರಕ್ತ ಮಿಶ್ರಿತ ನೊರೆ ಬಂದಿದ್ದರಿಂದ ಶಿಲ್ಪಾ ಪಾಲಕರಿಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಹೀಗಾಗಿ ಶಿಲ್ಪಾಳ ತಂದೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಿಸಿದ್ದರು.

ಮೃತ ಶಿಲ್ಪಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್‌ಎಸ್‍ಎಲ್ ತನಿಖೆ ವರದಿ ಎರಡು ಹೊಂದಿಕೆಯಾದ ಬೆನ್ನಲ್ಲೇ ಕೊಲೆ ಪ್ರಕರಣ ಖಚಿತಪಡಿಸಿಕೊಂಡ ಪೊಲೀಸರು ಡಾ. ಚನ್ನೇಶಪ್ಪ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಸದ್ಯ ಆರೋಪಿ ವೈದ್ಯ ಚನ್ನೇಶಪ್ಪ ನ್ಯಾಯಾಂಗ ಬಂಧನದಲ್ಲಿದ್ದಾನೆ.

Comments are closed.