ಪ್ರಮುಖ ವರದಿಗಳು

ಬರೋಬ್ಬರಿ 14 ವರ್ಷದ ಬಳಿಕ ಬೆಂಕಿಪೊಟ್ಟಣದ ಬೆಲೆಯಲ್ಲಿ ಏರಿಕೆ..!

Pinterest LinkedIn Tumblr

ಚೆನ್ನೈ: ಜನಸಾಮಾನ್ಯರ ನಿತ್ಯ ಬಳಕೆಯ ವಸ್ತುಗಳಲ್ಲಿ ಒಂದಾದ ಬೆಂಕಿಪೊಟ್ಟಣದ ಬೆಲೆ ಡಿಸೆಂಬರ್‌ ತಿಂಗಳಿನಿಂದ ದುಪ್ಪಟ್ಟಾಗಲಿದೆ.

ಪ್ರಸ್ತುತ ಬೆಂಕಿ ಪೊಟ್ಟಣಕ್ಕೆ ಒಂದು ರೂಪಾಯಿ ದರವಿದ್ದು ಅದು ಎರಡು ರೂಪಾಯಿಗಳಿಗೆ ಏರಲಿದೆ. ಕಚ್ಚಾವಸ್ತುಗಳ ಬೆಲೆಯಲ್ಲಿ ಆಗಿರುವ ಏರಿಕೆಯೇ ಇದಕ್ಕೆ ಕಾರಣ ಎನ್ನಲಾಗಿದೆ.

ಸುದೀರ್ಘ‌ 14 ವರ್ಷಗಳ ಬಳಿಕ ಬೆಂಕಿಪೊಟ್ಟಣದ ಬೆಲೆಯೇರಿಕೆಯಾಗುತ್ತಿದೆ. ಈ ಹಿಂದೆ 2007ರಲ್ಲಿ 50 ಪೈಸೆಗಳಿದ್ದುದನ್ನು 1 ರೂಪಾಯಿಗೆ ಏರಿಸಲಾಗಿತ್ತು.

ಬೆಂಕಿಪೊಟ್ಟಣ ಉದ್ಯಮದ ಐದು ಪ್ರಮುಖ ಸಂಘಟನೆಗಳು ಶಿವಕಾಶಿಯಲ್ಲಿ ಸಭೆ ನಡೆಸಿದ್ದು, ಗರಿಷ್ಠ ಮಾರಾಟ ದರ ಹೆಚ್ಚಳದ ನಿರ್ಧಾರ ತೆಗೆದುಕೊಂಡಿವೆ.

 

Comments are closed.