ಕರ್ನಾಟಕ

ಮೈಸೂರು ಗ್ಯಾಂಗ್ ರೇಪ್: ಸಂತ್ರಸ್ತೆ ಯುವತಿ ನ್ಯಾಯಾಧೀಶರ ಮುಂದೆ ಹಾಜರು, ಹೇಳಿಕೆ ದಾಖಲು

Pinterest LinkedIn Tumblr

ಮೈಸೂರು: ಕಳೆದ ಕೆಲ‌ದಿನಗಳ ಹಿಂದೆ ಮೈಸೂರು ಹೊರವಲಯದ ಚಾಮುಂಡಿ ಬೆಟ್ಟದ ತಪ್ಪಲು ಲಲಿತಾದ್ರಿಪುರದಲ್ಲಿ ನಡೆದ ಸಾಮೂಹಿಕ‌‌ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮುಂಬೈಯಿಂದ ಮೈಸೂರಿಗೆ ಆಗಮಿಸಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾಳೆ.

ಘಟನೆ ನಡೆದ ಬಳಿಕ 6 ಮಂದಿ ಆರೋಪಿಗಳನ್ನು ಬಂಧಿಸಿದ ಮೈಸೂರು ಪೊಲೀಸರು ಅವರಿಂದ ಹೇಳಿಕೆಯನ್ನು ಪಡೆದಿದ್ದರು. ಆದರೆ ಅತ್ಯಾಚಾರ ಘಟನೆ ನಡೆದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಎರಡು ದಿನಗಳ ಕಾಲ ಚಿಕಿತ್ಸೆ ಪಡೆದ ಸಂತ್ರಸ್ತೆ ನಂತರ ತನ್ನ ಪೋಷಕರೊಂದಿಗೆ ಮುಂಬೈಗೆ ತೆರಳಿದ್ದರು.

ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಸಂತ್ರಸ್ತೆಯಿಂದ ಹೇಳಿಕೆ ಪಡೆಯುವುದು ಅನಿವಾರ್ಯವಾಗಿತ್ತು. ಸಂತ್ರಸ್ತೆಯಿಂದ ಹೇಳಿಕೆ ಪಡೆಯದಿದ್ದಲ್ಲಿ ಕಾನೂನಾತ್ಮಕವಾಗಿ ಆರೋಪಿಗಳಿಗೆ ಅನುಕೂಲವಾಗುವ ಸಂಗತಿ ಅರಿತ ಪೊಲೀಸರು ಮುಂಬೈಗೆ ಹೋಗಿ ಸಂತ್ರಸ್ತೆ ಮತ್ತು ಆಕೆಯ ಪೋಷಕರ ಮನವೊಲಿಸಿ ಕರೆತಂದಿದ್ದಾರೆ.

ಯುವತಿಯ ಸ್ವ ಇಚ್ಚಾ ಹೇಳಿಕೆ ಏನು..?
ನಿನ್ನೆ ಮೈಸೂರಿನಲ್ಲಿ ನ್ಯಾಯಾಧೀಶರ ಮುಂದೆ ಹಾಜರಾದ ಸಂತ್ರಸ್ತೆ ಯುವತಿ ಅಂದು ಅತ್ಯಾಚಾರ ನಡೆದ ದಿನದಂದು ಆದ ವಿಚಾರಗಳನ್ನು ಹೇಳಿಕೆ ನೀಡಿದ್ದಾಳೆ. ‘ತಾನು ಮತ್ತು ಕಾಲೇಜಿನಲ್ಲಿ ಓದುವಾಗ ಪರಿಚಯವಾದ ಗೆಳೆಯ ಅಂದು ಸಂಜೆ ವಾಕಿಂಗ್ ಹೋಗಿದ್ದೆವು. ವಾತಾವರಣ ಚೆನ್ನಾಗಿದೆ ಎಂದು ಸ್ವಲ್ಪ ಹೊತ್ತು ಕುಳಿತುಕೊಳ್ಳೋಣವೆಂದು ಹೋಗಿದ್ದೆವು. ಆಗ ನಮ್ಮ ಬಳಿ ಬಂದ ಆರೇಳು ಮಂದಿ ಗುಂಪು ಮನಬಂದಂತೆ ಬೈಯಲು ಆರಂಭಿಸಿದರು. ನನ್ನ ಸ್ನೇಹಿತನ ಮೇಲೆ ಹಲ್ಲೆ ಮಾಡಿದಾಗ ಆತ ತಲೆಸುತ್ತಿ ಬಿದ್ದರು. ನನ್ನನ್ನು ಪಕ್ಕದ ಪೊದೆಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿದರು. ಸ್ವಲ್ಪ ಹೊತ್ತು ಕಳೆದ ನಂತರ ನನ್ನನ್ನು ನನ್ನ ಸ್ನೇಹಿತನ ಬಳಿ ಕರೆದುಕೊಂಡು ಬಂದು ಕೂರಿಸಿ ಹಣಕ್ಕೆ ಬೇಡಿಕೆಯಿಟ್ಟರು. ನನ್ನ ಸ್ನೇಹಿತನ ಮನೆಗೆ ಮೊಬೈಲ್ ನಲ್ಲಿ ಕರೆ ಮಾಡಿ ಹಣಕ್ಕೆ ಬೇಡಿಕೆಯಿಟ್ಟರು. ನಮ್ಮ ಮೇಲೆ ತೀವ್ರ ಹಲ್ಲೆ ನಡೆಸಿ ಹೊರಟುಹೋದರು, ರಾತ್ರಿಯಾಗಿತ್ತು. ತೀವ್ರ ಹಲ್ಲೆಗೊಳಗಾದ ನಾವು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದೆವು’ ಎಂದು ಯುವತಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾಳೆ.

 

Comments are closed.