ಕರ್ನಾಟಕ

ನಟ ದರ್ಶನ್ ಒಡೆತನದ ಫಾರಂ ಹೌಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ಬಂಧನ

Pinterest LinkedIn Tumblr

ಮೈಸೂರು: ನಟ ದರ್ಶನ್‌ ಒಡೆತನದ ವಿನೇಶ್ ಫಾರಂ ಹೌಸ್‌ನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.

ಟಿ. ನರಸೀಪುರ ರಸ್ತೆಯಲ್ಲಿರುವ ಫಾರಂ ಹೌಸ್‌ನಲ್ಲಿ ಕೆಲಸ‌ ಮಾಡಿಕೊಂಡಿದ್ದ ಶಿವಮೊಗ್ಗ ಮೂಲದ ಕುಟುಂಬದ ಅಪ್ರಾಪ್ತೆ ಮೇಲೆ ಸೆ.13 ರಂದು ಸೋಮವಾರ ರಾತ್ರಿ ಅದೇ ತೋಟದಲ್ಲಿ ಕುದುರೆ ಲಾಯದಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿ ಅತ್ಯಾಚಾರ ನಡೆಸಿದ್ದಾನೆ ಎಂಬುದು ಗೊತ್ತಾಗಿದೆ. ಈ ಸಂಬಂಧ ಮೈಸೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದಿಂದ ಬಂದ ಕುಟುಂಬವೊಂದು ವಿನೇಶ್ ಫಾರಂ ಹೌಸ್‌ನಲ್ಲಿ ಕೂಲಿ ಕೆಲಸ ಮಾಡುತ್ತಿತ್ತು. ಕುಟುಂಬದಲ್ಲಿ ತಾಯಿ, ತಂದೆ ಜೊತೆಗೆ 10 ವರ್ಷದ ಮಗಳು ಹಾಗೂ ಮಗನಿದ್ದು ಟಿಸಿ ಸಮಸ್ಯೆಯಿಂದ ಮಗಳು ಶಾಲೆಗೆ ಹೋಗದೆ ಕುಟುಂಬದ ಜೊತೆಯೇ ವಾಸವಿದ್ದಳು.

ಅದೇ ಫಾರಂ ಹೌಸ್‌ನಲ್ಲಿ ಕುದುರೆಗೆ ಲಾಯ ಹೊಡೆಯುವ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ನಜೀಮ್ ಎಂಬಾತ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಘಟನೆ ಸೆಪ್ಟೆಂಬರ್ 13 ರಂದು ನಡೆದಿದ್ದು, ಸಂತ್ರಸ್ತೆಯ ತಾಯಿ ಸೆಪ್ಟೆಂಬರ್ 15 ರಂದು ದೂರು ನೀಡಿದ್ದಾರೆ.

ಸಂತ್ರಸ್ತೆಯ ತಾಯಿ ನೀಡಿದ ದೂರಿನಂತೆ ಪೋಕ್ಸೊ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Comments are closed.