ಕರ್ನಾಟಕ

ಕುರಿಗಾಹಿಗಳೊಂದಿಗೆ ಕೂತು ಊಟ ಮಾಡಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್

Pinterest LinkedIn Tumblr

ಕೊಪ್ಪಳ: ಕೊಪ್ಪಳದ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ ನಟ ಪುನೀತ್ ರಾಜ್‍ಕುಮಾರ್ ಅವರು ಬೆಟ್ಟ ಬಂದ್ ಇರುವುದರಿಂದ ಗಂಗಾವತಿ ಸಮೀಪದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುತ್ತಾಟ ನಡೆಸಿದ್ದಾರೆ. ಸ್ಥಳೀಯ ಪ್ರವಾಸಿ ಸ್ಥಳಗಳಾದ ಋಷಿಮುಖ ಪರ್ವತ, ಸಣಾಪೂರ, ಬಂಡಿ ಹಲಾಪೂರ, ನಾರಾಯಣ ಪೇಟೆ ಊರುಗಳಿಗೆ ಭೇಟಿಯನ್ನು ನೀಡಿದ್ದಾರೆ.

ಕುರಿಗಾಯಿ ಮಕ್ಕಳ ಹಾಗೂ ಕುರಿಗಾಯಿ ಜೊತೆಗೆ ತಮ್ಮ ಐಶಾರಾಮಿ ಕಾರಿನ ಮುಂದೆ ನಿಂತುಕೊಂಡು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕುರಿಗಾಯಿ ಬಳಿ ಬಂದು ಅವರ ಜೊತೆ ಮಾತನಾಡಿದ ಪುನೀತ್ ರಾಜಕುಮಾರ್ ಬದುಕಿನ ಚಿತ್ರಣ, ಕಷ್ಟವೆಲ್ಲವನ್ನು ಆಲಿಸಿದರು. ಅವರೊಂದಿಗೆ ಕುಳಿತು ಊಟ ಮಾಡುವ ಮೂಲಕ ತಾನೆಷ್ಟು ಸಿಂಪಲ್ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ‌.

ಹೊಸಪೇಟೆಯ ಕುರಿಗಾಹಿ ಟೆಂಟ್ ಅನ್ನು ಕಂಡ ಕೂಡಲೇ ಕಾರಿನಿಂದ ಇಳಿದ ಪುನೀತ್ ರಾಜ್‍ಕುಮಾರ್ ಕುರಿಗಾಹಿಗಳ ಜೊತೆ ಸ್ವಲ್ಪ ಹೊತ್ತು ಸಮಯ ಕಳೆದರು. ಕುರಿ ಕಾಯುತ್ತಿದ್ದ ವ್ಯಕ್ತಿಯ ಪುತ್ರನನ್ನು ಎತ್ತಿಕೊಂಡು ಮುದ್ದಾಡಿದರು. ಬಳಿಕ ಅವರ ಜೊತೆ ಕುಳಿತು ಭೋಜನ ಸವಿದರು‌.

ಆನೆಗೊಂದಿ ಸಮೀಪದ ಐತಿಹಾಸಿಕ ಸ್ಥಳಗಳ ವಿಕ್ಷಣೆಗೆ ಕುತೂಹಲ ಹೊಂದಿದ್ದ ಪುನೀತ್ ರಾಜ್‍ಕುಮಾರ್ ಅವರು ಸಮೀಪದ ಸಣಾಪೂರ ಕೆರೆ, ಸಣಾಪೂರ ಪಾಲ್ಸ್, ಕಲ್ಲಿನ ಸೇತುವೆ ಸೇರಿದಂತೆ ಇತರ ಸ್ಥಳಗಳನ್ನು ವಿಕ್ಷಣೆಯನ್ನು ಮಾಡಿದರು. ನಂತರ ಸ್ಥಳೀಯ ಜನರು ಹಾಗೂ ಪುನೀತ್ ಅವರ ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಅವರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

Comments are closed.