ಕರ್ನಾಟಕ

ಯಾದಗಿರಿಯ ಬುಡ ಜಂಗಮ ಜನಾಂಗದ ಕಾಲೋನಿಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಭೇಟಿ

Pinterest LinkedIn Tumblr

ಉಡುಪಿ: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾದ ಅರುಣ್ ಕುಮಾರ್ ಅವರು ಯಾದಗಿರಿ ಜಿಲ್ಲೆಯ ಗುರುಮಠಕಲ್ ಪುರಸಭಾ ಇಂದಿರ ನಗರ ಬುಡ ಜಂಗಮ ಜನಾಂಗದ ಕಾಲೋನಿಗೆ ಪುರಸಭಾ ಕಾರ್ಯನಿರ್ವಾಣಾಧಿಕಾರಿ ಶರಣಪ್ಪ ಮಡಿವಾಳರ ಜೊತೆಗೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದರು.

ಮೂಲಭೂತ ಸೌಕರ್ಯಗಳಾದ ಶೌಚಾಲಯ, ವಸತಿ, ವಿದ್ಯುತ್, ರಸ್ತೆ, ಪಡಿತರ ಆಹಾರ ವಂಚಿತರಾಗಿದ್ದವರಿಗೆ ಸೌಲಭ್ಯ ಒದಗಿಸಲು ಸೂಚಿಸದರು. ಇಲ್ಲಿ 200 ಮಕ್ಕಳಿದ್ದು ಅಂಗನವಾಡಿಯೂ ಇದ್ದು ಶಿಕ್ಷಕಿ ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳಿಗೆ ಕೂಡಲೆ ಅಂಗನವಾಡಿ ತೆರೆಯುವಂತೆ ಸೂಚಿಸಿದ್ದಾರೆ.

ಇದೆ ಸಂದರ್ಭದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಇರುವ ದೇವರಾಜು ಅರಸು ಬಾಲಕ ಮತ್ತು ಬಾಲಕಿಯರ ಹಾಸ್ಟೆಲ್ ಗಳಿಗೆ ಭೇಟಿ ಕೊಟ್ಟು ವಿದ್ಯಾರ್ಥಿಗಳೊಂದಿಗೆ ಸಹಭೋಜನ ಮಾಡಿ ಆಹಾರ ಮತ್ತು ವ್ಯವಸ್ಥೆಯ ಬಗ್ಗೆ ಚರ್ಚಿಸಿದರು.

Comments are closed.