ಕರ್ನಾಟಕ

ಪೀಠಾಧಿಕಾರದ ವಿಚಾರ: ಸಚಿವ ಶ್ರೀರಾಮುಲು ಎದುರೇ ಆತ್ಮಹತ್ಯೆಗೆ ಯತ್ನಿಸಿದ ಸ್ವಾಮೀಜಿ..!

Pinterest LinkedIn Tumblr

ಚಿತ್ರದುರ್ಗ: ಸಚಿವ ಬಿ. ಶ್ರೀರಾಮುಲು ಎದುರಿಗೆ ಸ್ವಾಮೀಜಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗದ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದ್ದ ವೇಳೆ ಶರಣರ ಸುಜ್ಞಾನ ಮಂಟಪದ ತಿಪ್ಪೇರುದ್ರ ಸ್ವಾಮೀಜಿ ಆತ್ಮಹತ್ಯೆಗೆ ಯತ್ನಿಸಿದ್ದು ತಕ್ಷಣ ಪೋಲೀಸರು ಸ್ವಾಮೀಜಿ ಕೈಯಲ್ಲಿದ್ದ ವಿಷದ ಬಾಟಲಿಯನ್ನು ಕಸಿದುಕೊಂಡು ಅನಾಹುತ ತಪ್ಪಿಸಿದ್ದಾರೆ.

ಅಧಿಕಾರ ಹಾಗೂ ಹಣದ ಬಲದಿಂದಾಗಿ ತನಗೆ ನ್ಯಾಯಯುತವಾಗಿ ಸಿಗಬೇಕಿದ್ದ ಪೀಠಾಧಿಕಾರ ಕೈತಪ್ಪಿದೆ ಎಂದು ಸ್ವಾಮೀಜಿ ಸಚಿವ ರಾಮುಲು ಅವರಲ್ಲಿ ಅಳಲು ತೋಡಿಕೊಂಡಿದ್ದಾರೆ.

ಪಕ್ಷದ ಕಚೇರಿ ಸಮೀಪ ನಡೆದ ಈ ಘಟನೆಯಿಂದಾಗಿ ಸಚಿವ ಶ್ರೀರಾಮುಲು ಕೆಲ‌ಕಾಲ ಗೊಂದಲಕ್ಕೀಡಾದರು.

 

Comments are closed.