
ಬೆಂಗಳೂರು: ಕನ್ನಡ ನಟ ಮಯೂರ್ ಪಟೇಲ್ ಗೆ ಜೀವಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಸೈಟ್ ಖರೀದಿ ವಿವಾದದ ಸಂಬಂಧ ನಟ ಮಯೂರ್ ಗೆ ಜೀವ ಬೆದರಿಕೆ ಹಾಕಿದ್ದಾಗಿ ವರದಿಯಾಗಿದೆ.
ಎಂ.ಎಸ್ ಸುಬ್ರಹ್ಮಣ್ಯಂ ಎಂಬುವರಿಂದ ನಟ ಮಯೂರ್ ಸೈಟ್ ಖರೀದಿಗೆ ಮುಂದಾಗಿದ್ದು ಇದೀಗ ಮಯೂರ್ ರಿಜಿಸ್ಟರ್ ಮಾಡಿಸಿಕೊಂಡಿರುವ ಸೈಟ್ ಗೆ ಅಪರಿಚಿತರು ಕಂಪೌಂಡ್ ಹಾಕಿಕೊಂಡಿರುವುದಲ್ಲದೆ “ನೀನೇನಾದರೂ ಈ ಜಾಗಕ್ಕೆ ಬಂದರೆ ನಾವು ಯಾರೆಂದು ತೋರಿಸ್ತೇವೆ” ಎಂದು ಧಮ್ಕಿ ಹಾಕಿದ್ದಾರೆ.
ಈ ಕುರಿತಂತೆ ಅನಂತರಾಮರೆಡ್ಡಿ, ಆತನ ಮಗ ಮಂಜುನಾಥ್ ರೆಡ್ಡಿ ಹಾಗೂ ಇನ್ನೂ ನಾಲ್ವರ ವಿರುದ್ಧ ಮಯೂರ್ ಪಟೇಲ್ ಎಸ್ಆರ್ ಲೇಔಟ್ ಠಾಣೆ ಪೊಲೀಸರಲ್ಲಿ ದೂರು ನೀಡಿದ್ದಾರೆ.
Comments are closed.