ಅಂತರಾಷ್ಟ್ರೀಯ

ಇಪ್ಪತ್ತು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟ ತನ್ನ ಚಿಕ್ಕಪ್ಪನ ಅಸ್ಥಿಪಂಜರದಲ್ಲಿ ಎಲೆಕ್ಟ್ರಿಕ್ ಗಿಟಾರ್ ಮಾಡಿದ ಸಂಗೀತಗಾರ

Pinterest LinkedIn Tumblr

`ಪ್ರಿನ್ಸ್‌ ಮಿಡ್ರೈಟ್‌’ ಎಂದು ಕರೆಸಿಕೊಳ್ಳುವ ಸಂಗೀತಗಾರ ಎಲೆಕ್ಟ್ರಿಕ್ ಗಿಟಾರ್ ಅನ್ನು ಮೃತಪಟ್ಟ ತನ್ನ ಚಿಕ್ಕಪ್ಪನ ಅಸ್ಥಿಪಂಜರದಲ್ಲಿ ಮಾಡಿದ್ದಾರೆ.

ಫಿಲಿಪ್ ಎಂಬವರ ಅಸ್ಥಿಪಂಜರ ಇದು. ಇಪ್ಪತ್ತು ವರ್ಷಗಳ ಹಿಂದೆ ಕಾರು ಅಪಘಾತದಲ್ಲಿ ಫಿಲಿಪ್ ಮೃತಪಟ್ಟಿದ್ದರು. ಈ ವೇಳೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಲೆಂದು ಫಿಲಿಪ್ ಅಸ್ಥಿಪಂಜರವನ್ನು ಸ್ಥಳೀಯ ಕಾಲೇಜಿಗೆ ದಾನವಾಗಿ ನೀಡಲಾಗಿತ್ತು. ಆದರೆ, ಒಂದಷ್ಟು ವರ್ಷಗಳ ನಂತರ ಈ ಕಾಲೇಜು ಈ ಅಸ್ಥಿಪಂಜರದ ಬಳಕೆಯನ್ನು ನಿಲ್ಲಿಸಿತ್ತು. ಇತ್ತ, ಫಿಲಿಪ್ ಕುಟುಂಬದವರೂ ಇದನ್ನು ಮರಳಿ ಪಡೆದು ಅಂತ್ಯಸಂಸ್ಕಾರ ನಡೆಸಲು ನಿರಾಕರಿಸಿದ್ದರು. ಈ ವೇಳೆ, ಪ್ರಿನ್ಸ್‌ ಮಿಡ್ನೈಟ್ ಮುತುವರ್ಜಿ ವಹಿಸಿ ಎಲ್ಲಾ ದಾಖಲೆಗಳನ್ನು ಸಿದ್ಧ ಮಾಡಿಕೊಂಡು ಬಂದು ಅಸ್ಥಿಪಂಜರವನ್ನು ಮನೆಗೆ ತಂದಿದ್ದರು.

ಹೀಗೆ ಮನೆಗೆ ತಂದ ಅಸ್ಥಿಪಂಜರವನ್ನು ಇವರು ಗಿಟಾರ್ ಆಗಿ ಪರಿವರ್ತಿಸಲು ನಿರ್ಧರಿಸಿದ್ದರು. ಈ ಬಗ್ಗೆ ಒಂದಷ್ಟು ಅಧ್ಯಯನವನ್ನೂ ಇವರು ನಡೆಸಿದ್ದರು. ವಿಶ್ವದಲ್ಲಿ ಯಾರೂ ಇದುವರೆಗೆ ಅಸ್ಥಿಪಂಜರದಲ್ಲಿ ಗಿಟಾರ್ ಮಾಡಿಲ್ಲ ಎಂದು ಇವರಿಗೆ ಗೊತ್ತಾಗಿತ್ತು. ಹೀಗಾಗಿ, ಇವರೇ ಈ ಅಸ್ಥಿಪಂಜರದಲ್ಲಿ ಎಲೆಕ್ಟ್ರಿಕ್ ಗಿಟಾರ್ ಸಿದ್ಧಪಡಿಸಿದ್ದು, ಈ ವಿಡಿಯೋವನ್ನು ಈಗ ಯುಟ್ಯೂಬ್‌ನಲ್ಲೂ ಹಂಚಿಕೊಳ್ಳಲಾಗಿದೆ.

Comments are closed.