ಕರಾವಳಿ

ಸ್ನಾನ ಮಾಡುತ್ತಿದ್ದ ಮಹಿಳೆಯ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದ ವ್ಯಕ್ತಿ ಸೆರೆ

Pinterest LinkedIn Tumblr

ಮಂಗಳೂರು/ ಉಳ್ಳಾಲ : ಉಳ್ಳಾಲ ಠಾಣಾ ವ್ಯಾಪ್ತಿಯ ಖಾಸಗಿ ಆಸ್ಪತ್ರೆಯ ಕೊಠಡಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ದೃಶ್ಯಗಳನ್ನು ಯುವಕನೋರ್ವ ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿದ ಘಟನೆ ನಡೆದಿದ್ದು, ಉಳ್ಳಾಲದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮದನಿನಗರ ನಿವಾಸಿ ಅಬ್ದುಲ್‌ ಮುನೀರ್‌ (40) ಎಂದು ಹೆಸರಿಸಲಾಗಿದೆ.

ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರ ಜತೆಗಿದ್ದ ಮಹಿಳೆ ಸ್ನಾನ ಮಾಡಲು ತೆರಳಿದ್ದ ಸಂದರ್ಭದಲ್ಲಿ ಆರೋಪಿ ಮುನೀರ್, ಮೊಬೈಲ್ ಮೂಲಕ ಸ್ನಾನದ ದೃಶ್ಯವನ್ನು ಸೆರೆಹಿಡಿದಿದ್ದ. ಇದನ್ನು ಗಮನಿಸಿದ ಮಹಿಳೆ ಕೂಡಲೇ ಹೊರಬಂದಾಗ, ಆರೋಪಿ ತಲೆಮರೆಸಿಕೊಂಡಿದ್ದನು.

ಈ ಕುರಿತು ಮಹಿಳೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ಆಸ್ಪತ್ರೆಯ ಸಿಸಿಟಿವಿಯ ದಾಖಲೆಗಳನ್ನು ಪರಿಶೀಲಿಸಿದಾಗ ಮುನೀರ್ ಕೃತ್ಯದಲ್ಲಿ ತೊಡಗಿರುವುದು ಗೊತ್ತಾಗಿತ್ತು. ಶುಕ್ರವಾರ ಆತನನ್ನು ಮನೆ ಸಮೀಪ ಬಂಧಿಸಿದ್ದಾರೆ.

ಉಳ್ಳಾಲ ಠಾಣಾಧಿಕಾರಿ ಸಂದೀಪ್ ಜಿ.ಎಸ್., ಪಿಎಸ್‌ಐ ಶಿವಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್‌ಐ ರೇವಣ್ಣಸಿದ್ಧಯ್ಯ ಹಾಗೂ ಸಿಬ್ಬಂದಿ ಪ್ರಶಾಂತ್ ಮತ್ತು ಅಕ್ಬರ್ ಪಾಲ್ಗೊಂಡಿದ್ದರು.

Comments are closed.