ಕರ್ನಾಟಕ

ಮೋದಿಯವರ ಕೇಶದ ಕುರಿತು ಪೇಜಾವರ ಮಠದ ಸ್ವಾಮೀಜಿ ಹೇಳಿದ್ದೇನು ಗೊತ್ತಾ!?

Pinterest LinkedIn Tumblr


ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿ ಅವರ ಕೇಶವೀಗ ಚರ್ಚೆ ವಿಚಾರವಾಗಿದ್ದು, ಮೋದಿಯವರ ಕೇಶದ ಗುಟ್ಟನ್ನು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೊರಹಾಕಿದ್ದಾರೆ, ರಾಮಮಂದಿರ ನಿರ್ಮಾಣ ಪೂರ್ಣಗೊಳಿಸುವವರಿಗೆ ಮೋದಿಯವರು ಕೇಶ ತೆಗೆಯುವುದಿಲ್ಲ ಎಂದು ಸಂಕಲ್ಪ ಮಾಡಿರಬಹುದೆಂದು ಎಂದು ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ಆಧ್ಯಾತ್ಮಿಕ ವಿಚಾರದತ್ತ ಹೆಚ್ಚು ಒಲವು, ಜೊತೆಗೆ ಕೇಶದ ಬಗ್ಗೆ ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ. ಅದರಿಂದ ಏನಾದರೂ ತಪ್ಪು ‌ಕಾಣುತ್ತಿದ್ದೀರಾ? ನಮ್ಮಲ್ಲಿ ದೀಕ್ಷಾ ಬದ್ಧರಾಗುವುದು ಅಂತಿದೆ. ಹೀಗಾಗಿ ಪ್ರಧಾನಿಗಳು ಹಾಗೆ ಮಾಡಿರಬಹುದು ಎನ್ನುವ ಲೆಕ್ಕಾಚಾರ ನಮ್ಮದು. ನಮಗನ್ನಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರಕ್ಕೆ ಶಿಲಾನ್ಯಾಸ ಮಾಡಿದ್ದಾರೆ. ಇದರಿಂದ ಅವರು ನೈತಿಕವಾಗಿ ಸಂಪೂಣ೯ ಜವಾಬ್ದಾರಿ ಹೊಂದಿದ ಹಾಗೆ ಇರಬಹುದು. ಅವರು ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ, ನಮಗನ್ನಿಸಿದ್ದೂ ಹೀಗೆ. ರಾಮ ಮಂದಿರ ಪೂರ್ಣವಾಗುವವರೆಗೆ ಕೇಶ ತೆಗೆಯುವುದಿಲ್ಲ ಅಂತ ಅನುಷ್ಠಾನ ಮಾಡಿರಬಹುದು ಅಂತ ಅನ್ನಿಸುತ್ತೆ ಎಂದರು.

ಮೊದಲು ಪ್ರಧಾನಿ ನರೇಂದ್ರ ಮೋದಿ ಅವರು ಇದ್ದಿದ್ದು ಹಾಗೆಯೇ. ವೇಷಭೂಷಣ ಬದಲಾವಣೆಯಿಂದ ನಿಮಗೆ ಈಗ ಹಾಗೆ ಕಾಣಿಸುತ್ತಿರಬಹುದು. ರಾಮ ಮಂದಿರ ನಿರ್ಮಾಣಕ್ಕೆ ಮೂರುವರೆ ವರ್ಷ ಅವಧಿಯಿದ್ದು, 1500 ಕೋಟಿ ರೂಪಾಯಿ ಅಂದಾಜು ಬಜೆಟ್ ಇದೆ ಎಂದು ರಾಮ ಮಂದಿರ ಟ್ರಸ್ಟ್ ಸದಸ್ಯರಾಗಿರುವ ವಿಶ್ವಪ್ರಸನ್ ತೀರ್ಥ ಸ್ವಾಮೀಜಿ ಹೇಳಿದರು. 500 ಕೋಟಿ ರೂ. ಮಂದಿರ ನಿರ್ಮಾಣಕ್ಕೆ.1000 ಕೋಟಿ ರೂಪಾಯಿ ಪರಿಸರದ ಅಭಿವೃದ್ದಿ. ಯಾತ್ರಾನಿವಾಸ, ಮಾರ್ಗಗಳ ನಿರ್ಮಾಣಕ್ಕೆಂದು ಅಂದಾಜಿಸಲಾಗಿದೆ. ಪ್ರಾರಂಭದಲ್ಲಿ ಭೂಮಿ ಪರೀಕ್ಷೆ ಸವಾಲು ಆಗಿ ಹೋಯಿತು. ಅಲ್ಲಿ ಕಲ್ಲಿನ ಶಿಲಾಮಂದಿರ ನಿರ್ಮಾಣಕ್ಕೆ ಭೂಮಿ ಸಾಮರ್ಥ್ಯ ಬೇಕು. ಅಲ್ಲಿ ಅಂದಾಜು 200 ಅಡಿ ವರೆಗೂ ಮರಳು ಮಿಶ್ರತ, ಧೂಳು ಮರಳು ಇದೆ. ಈಗ ಅದನ್ನು ಹೇಗೆ ನಿರ್ಮಾಣ ಮಾಡಬೇಕು. ಪಂಚಾಂಗ ಎತ್ತಿಕೊಂಡು ಬರಬೇಕು ಎಂದು ಪರಿಶೀಲನೆ ಆಗಬೇಕು ಎಂದರು.

ದೆಹಲಿಯಲ್ಲಿ ರೈತರ ಚಳುವಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ‌ ಗಮನಕ್ಕೆ ಬಂದಂತೆ ಈಗ ದೆಹಲಿಯಲ್ಲಿ ನಡೆಯುತ್ತಿರುವುದು ರೈತ ಚಳವಳಿ ಅಲ್ಲ. ರೈತರ ಚಳವಳಿ ಮುಖವಾಡದಲ್ಲಿ ಇನ್ನೇನೋ ನಡಿತಿದೆ ಎಂದು ಸ್ವಾಮೀಜಿ ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಪ್ರತಿದಿನ ಮಾತುಕತೆಗೆ ಕರೆಯುತ್ತಿದ್ದಾರೆ. ಯಾವ ಅಂಶದಲ್ಲಿ ವಿರೋಧ ಇದೆ. ಆ ಬಗ್ಗೆ ಚರ್ಚೆ ಮಾಡಿ ಪರಿಹರಿಸೋಣ ಎಂದು ಹೇಳುತ್ತಿದ್ದಾರೆ. ಇಷ್ಟು ಆಹ್ವಾನ ನೀಡಿದರೂ ಜೈಲಿನಲ್ಲಿದ್ದ ಅಂಥವರನ್ನ, ಇಂಥವರನ್ನ ಬಿಡುಗಡೆ ಮಾಡಬೇಕು ಅಂತಿದ್ದು. ಅದು ಟ್ರ್ಯಾಕ್ ತಪ್ಪಿ ಹೋಗುತ್ತಿದೆ. ಹಾಗಾಗಿ ಈ ಚಳವಳಿ ಬಗ್ಗೆ ನಮ್ದು ಸಂಪೂರ್ಣ ಸಹಮತ ಇಲ್ಲ. ರೈತರೇ ಚಳವಳಿ ಮಾಡುತ್ತಿದಾರೆ ಎಂಬುದರ ಬಗ್ಗೆ ನಮಗೆ ಸಂಶಯ ಇದೆ. ಮಾಧ್ಯಮಗಳು ಬಿತ್ತರಿಸಿದಂತೆ ರೈತರು ಅಲ್ಲ ಎಂದರು.
ಬಳಿಕ ಬಾಗಲಕೋಟೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನದ ಜಿಲ್ಲಾ ಕಾರ್ಯಾಲಯವನ್ನು ವಿಶ್ವಪ್ರಸನ್ನತೀರ್ಥರು ಸ್ವಾಮೀಜಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಿಂದೂಪರ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಭಾಗಿಯಾಗಿದ್ದರು.

Comments are closed.