ಕರ್ನಾಟಕ

ಜೈನ ದೀಕ್ಷೆ ಪಡೆಯಲಿರುವ ಕೋಟ್ಯಧೀಶನ 20ರ ಹರೆಯದ ಪುತ್ರಿ

Pinterest LinkedIn Tumblr


ಯಾದಗಿರಿ: ಸರ್ವಸ್ವ ತೊರೆದು ಜೈನ ಸಾಧ್ವಿ ದೀಕ್ಷೆ ಪಡೆಯಲು ಮುಂದಾಗಿರುವ 21 ವರ್ಷದ ಯುವತಿ ಯಶೀತಾ ಅವರ ಮೆರವಣಿಗೆ ನಗರದಲ್ಲಿ ಅದ್ಧೂರಿಯಾಗಿ ನಡೆಯಿತು. ಈ ಮೆರವಣಿಗೆಗೆ ಸಹಸ್ರಾರು ಜನರು ಸಾಕ್ಷಿಯಾಗಿದ್ದರು. ನೆರೆಯ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕೋಟ್ಯಧೀಶ ಆಗಿರುವ ದೀಪಕ್‌ ಕುಮಾರ ಮತ್ತು ಮೀನಾಕುಮಾರಿ ಅವರ ಏಕೈಕ ಪುತ್ರಿಯಾಗಿರುವ ಯಶೀತಾ ದೀಕ್ಷೆ ಪಡೆಯಲಿದ್ದಾರೆ.

ಸನ್ಯಾಸತ್ವ ಪಡೆಯುವ ಮುನ್ನ ಲೋಕ ಸಂಚಾರ ಮಾಡುವುದು ವಾಡಿಕೆಯಿದೆ. ಇದಕ್ಕಾಗಿಯೇ ಅವರು ನಗರಕ್ಕೆ ಆಗಮಿಸಿದ್ದರು. ಬಹಳ ವಿಜೃಂಭಣೆಯಿಂದ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಈ ದಂಪತಿಗೆ ಒಂದು ಗಂಡು ಮತ್ತು ಒಂದು ಹೆಣ್ಣು ಮಗಳು ಇದ್ದಾರೆ. ಇರುವ ಏಕೈಕ ಪುತ್ರಿ ದೀಕ್ಷೆ ಪಡೆಯುತ್ತಿದ್ದಾರೆ. ಇ ಮೆರವಣಿಗೆಗೂ ಮುಂಚೆ ಯುವತಿಯ ಹಸ್ತದಿಂದಲೇ ದವಸಧಾನ್ಯ ಸೇರಿದಂತೆ ಬಟ್ಟೆಯನ್ನು ದಾನವಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಅವರ ಬಂಧುಗಳು, ನಗರದ ಜೈನ ಸಮುದಾಯದ ನಿವಾಸಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು. ಯಶೀತಾ ಸಂಬಂಧಿಗಳಾಗಿರುವ ಜೈನ ಬಡಾವಣೆಯ ನಿವಾಸಿಗಳಾದ ಅರವಿಂದಕುಮಾರ ಗಾಂಧಿ, ಅನಿಲ್‌ಕುಮಾರ ಕುಂದನಮಲ್‌ ಗಾಂಧಿ, ವಿನಯ್‌ಕುಮಾರ್‌ ಗಾಂಧಿ, ದೇವೀಂದ್ರಕುಮಾರ ಗಾಂಧಿ ಸಮ್ಮುಖದಲ್ಲಿ ಯಾದಗಿರಿಯ ಜೈನ ಕಾಲೊನಿಯಲ್ಲಿರುವ ಅವರ ನಿವಾಸದಿಂದ ಸಾರೋಟಿನಲ್ಲಿ ಹೊರಟ ಮೆರವಣಿಗೆ ಪಾಶ್ರ್ವನಾಥ ಜೈನ ಮಂದಿರದವರೆಗೂ ಸಹ ಅತ್ಯಂತ ಸಂಭ್ರಮದಿಂದ ನಡೆಯಿತು.

ಮಾಜಿ ಶಾಸಕ ಡಾ.ವೀರಬಸವಂತರೆಡ್ಡಿ ಮುದ್ನಾಳ್‌, ಸಕಾಲಚಂದ ಸೊಲಂಕಿ,ರಮೇಶ್‌ ಕಂಗಟಾಣಿ, ವಿನೋದ ಭಂಡಾರಿ, ನರೇಂದ್ರ ಗಾಂಧಿ, ಮಂಗೀಲಾಲ್‌ ಗಾಂಧಿ, ಲಖಣ ಗಾಂಧಿ,ರಂಜಿತ್‌ ಭಂಡಾರಿ, ವಿಜಯ್‌ ಗಾಂಧಿ, ಪಾರಸಮಲ್‌ ಜೈನ, ನಯನಮಲ್‌ ಭಂಡಾರಿ, ನೇಮಿಚಂದ ಗಾಂಧಿ ಸೇರಿದಂತೆ ಇನ್ನಿತರರಿದ್ದರು.

ಮಾರ್ಚ್‌ನಲ್ಲಿ ಸನ್ಯಾಸತ್ವ ದೀಕ್ಷೆ
ಮುಂಬರುವ 2021ರ ಮಾರ್ಚ್, 21ರಂದು ಮಹಾರಾಷ್ಟ್ರ ರಾಜ್ಯದ ಪುಣೆಯಲ್ಲಿಜೈನ ಧರ್ಮದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸನ್ಯಾಸತ್ವ ದೀಕ್ಷೆಯನ್ನು 20 ವರ್ಷದ ಯುವತಿ ಯಶೀತಾ ಸ್ವೀಕರಿಸುವರು. ಜೈನ ಧರ್ಮದ ಪ್ರಚಾರದೊಂದಿಗೆ ತಮ್ಮ ಆತ್ಮ ಕಲ್ಯಾಣಕ್ಕಾಗಿ ಭವ ಬಂಧನ ಕಿತ್ತೊಗೆದು ಜೈನ ಸಾಧ್ವಿ ದೀಕ್ಷೆ ಪಡೆಯಲು ಅಣಿಯಾಗಿರುವುದು ನಿಜಕ್ಕೂ ಸಹ ಮೆಚ್ಚುವಂತಹ ಕಾರ್ಯವಾಗಿದೆ.

Comments are closed.