ಕರ್ನಾಟಕ

ಸಭಾಪತಿ ಬಂದಾಗ ಬಾಗಿಲು ಮುಚ್ಚಿ, ಉಪಸಭಾಪತಿಯನ್ನು ಪೀಠದಲ್ಲಿ ಕೂರಿಸಿದ್ದೆ ಮಹಾಪರಾಧ; ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು; ವಿಧಾನ ಪರಿಷತ್​ನಲ್ಲಿ ಸಭಾಪತಿಯವರ ಗೈರು ಹಾಜರಿಯಲ್ಲಿ ಕೆಲಸ ಮಾಡಿ ಅಂತಾ ಉಪಸಭಾಪರಿಗೆ ಹೇಳ್ತಾರೆ.  ನಿಯಮಾವಳಿಗಳ ಚೌಕಟ್ಟಿನಲ್ಲಿ ಸಭಾಪತಿಗಳು ಸದನ ನಡೆಸುತ್ತಾರೆ.  ಕಾನೂನು ಸಚಿವರ ಆದೇಶದ ಮೇರೆಗೆ ಕೌನ್ಸಿಲ್‌ ಮೀಟಿಂಗ್ ಕರೆದು ಆ ಲೆಟರ್ ನಲ್ಲಿ ಡಿಸ್ಕಷನ್ ಮಾಡಿ ಆ ಮೂಲಕ ನೋ ಕಾನ್ಫರೆನ್ಸ್ ಮೋಶನ್ ಮೂ ಮಾಡುತ್ತಾರೆ. ಆದರೆ ಈ ರೀತಿಯಲ್ಲಿ ಮಾಡದೆ 15ನೇ ತಾರೀಖಿನಂದು ಪರಿಷತ್ ನಡೆಸಿ ಎಂದು ಇದೆ. ಆದರೆ ಇದು ಆರ್ಡರ್ ಪ್ರಕಾರ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಪರಿಷತ್​ನಲ್ಲಿ ನಡೆದ ಹೈಡ್ರಾಮಾದ ಬಳಿಕ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ರಾಜ್ಯಪಾಲರ ಭೇಟಿಗೆ ತೆರಳಿದ ನಂತರ ತುರ್ತು ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಅವರು, ನೋಟಿಸ್ ನೀಡಿದ 14 ದಿನ ಆದ ನಂತರ 5 ದಿನಗಳ ಒಳಗೆ ಅವಿಶ್ವಾಸ ನಿರ್ಣಯ ಮಾಡಬೇಕು ಎಂದು ಇದೆ. ಆದರೆ ಎಲ್ಲಿ ಮಾಡಿದ್ದಾರೆ ಇದನ್ನೆಲ್ಲಾ. ಕೌಲ್ ಅಂಡ್ ಸೆಕ್ಟರ್ ಅವರ ಪ್ರಕಾರ ಕಾರಣಗಳನ್ನು ಅಟ್ಯಾಚ್ ಮಾಡಬೇಕು. ಆದರೆ ಯಾವುದನ್ನು ಅಟ್ಯಾಚ್ ಮಾಡಿಲ್ಲ, ಅದಕ್ಕೆ ಆರ್ಡರ್ ಪ್ರಕಾರ ಇಲ್ಲ ಅಂತ ರಿಜೆಕ್ಟ್ ಮಾಡಿದ್ದಾರೆ. ಚೇರ್ಮನ್ ಬರುವುದಕ್ಕೆ ಮುಂಚೆ ಬೆಲ್ ಆಗುತ್ತೆ. ಆ ನಂತರ ಮಾರ್ಷಲ್ ಸಭಾಪತಿ ಬಂದ್ರು ಅಂತ ಹೇಳುತ್ತಾರೆ. ಆ ನಂತರ ಅವರು ಬರುತ್ತಾರೆ. ಆದರೆ ಇದನ್ನು ಅವರು ಫಾಲೊ ಮಾಡಿಲ್ಲ. ಚೇರ್ಮನ್ ಬರುವ ಬಾಗಿಲನ್ನು ಚಿಲಕ ಹಾಕಿಸಿದ್ದಾರೆ. ಸಭಾಪತಿ ಬರುವುದಕ್ಕೆ ಬಿಟ್ಟಿಲ್ಲ. ಬೆಲ್ ಆಗುವಾಗ ಉಪಸಭಾಪತಿ ಕೂರಿಸಿದ್ದಾರೆ. ಇದು ಪ್ರಜಾಪ್ರಭುತ್ವನಾ, ಅಥವಾ ನರೇಂದ್ರ ಮೋದಿ ಪ್ರಜಾಪ್ರಭುತ್ವನಾ ಎಂದು ಪ್ರಶ್ನಿಸಿ, ಇದು ಅಸಂವಿಧಾನಿಕ, ಕಾನೂನು ವಿರುದ್ಧವಾದದ್ದು ಎಂದು ಗುಡುಗಿದರು.

ರಾಜ್ಯದ ಇತಿಹಾಸದಲ್ಲೇ ಇಂತಹ ಪರಿಸ್ಥಿತಿ ಎದುರಾಗಿರಲಿಲ್ಲ. ಇಂತಹ ಗೂಂಡಾಗಿರಿಯನ್ನು ನೋಡಿಲ್ಲ. ಇದನ್ನು ನಾನು ಖಂಡಿಸುತ್ತೇನೆ. ಬಾಗಿಲು ಹಾಕಿ ಚೇರ್ಮನ್ ತಡೆದಿದ್ದಾರೆ. ಇದು ಕಾನೂನು ಬಾಹಿರವಾದುದು. ಸಭಾಪತಿಯನ್ನೇ ಸದನದೊಳಗೆ ಬರದಂತೆ ತಡೆದಿದ್ದು ನಿಯಮಬಾಹಿರ. ಸಭಾಪತಿ ಇದ್ದಾಗ ಉಪಸಭಾಪತಿ ಕೂರುವಂತಿಲ್ಲ. ಅವರಿಗೆ ಏನಾದರೂ ಸಮಸ್ಯೆ ಇದ್ದಾಗ ಇಲ್ಲವೇ ಸಭಾಪತಿ ಹೇಳಿದಾಗ ಮಾತ್ರ ಉಪಸಭಾಪತಿ ಕೂರಬೇಕು. ಈಗ ನಡೆ ಈಗ ನಡೆದಿರುವ ಸಂಪೂರ್ಣ ಕಾನೂನು ಉಲ್ಲಂಘನೆ. ಬಿಜೆಪಿಗೆ ಮೆಜಾರಿಟಿನೂ ಇಲ್ಲ. ಜೆಡಿಎಸ್ ಸಪೋರ್ಟ್ ನಿಂದ ಈಗ ಬಂದಿದ್ದಾರೆ. ಸದನದ ಗೂಂಡಾಗಿರಿಗೆ ಜೆಡಿಎಸ್ ಕೂಡ ಕಾರಣ ಎಂದು ಆರೋಪ ಮಾಡಿದರು.

ಚೇರ್ಮನ್ ಒಳಗೆ ಬರಲು ಬಿಡಲಿಲ್ಲ. ಇದು ಕ್ರಿಮಿನಲ್ ಕೇಸ್ ಆಗುತ್ತೆ. ಸಭೆಯಲ್ಲಿ ನಡೆದ ಗೂಂಡಾಗಿರಿನಲ್ಲಿ ಜೆಡಿಎಸ್ ಕೂಡ ಭಾಗಿಯಾಗಿದೆ. ಇಬ್ಬರು ಸೇರಿಕೊಂಡು ಗುಂಡಾಗಿರಿ ಮಾಡಿದ್ದಾರೆ. ಇವತ್ತಿನ ಸನ್ನಿವೇಶ ಪ್ರಜಾಪ್ರಭುತ್ವದ ಕಗ್ಗೊಲೆ. ಸಂವಿಧಾನ ವಿರೋಧಿ ನಡೆ. 165ನೇ ನಿಯಮ ಹೀಗೆ ಮಾಡಿ ಅಂತ ಹೇಳುತ್ತಾ? ಬಿಜೆಪಿಯ ಗೂಂಡಾಗಿರಿಯನ್ನು ಖಂಡಿಸುತ್ತೇನೆ. ಬಿಜೆಪಿ, ಜೆಡಿಎಸ್ ಎರಡೂ ಒಂದೇ. ಇವರ ಮೇಲೆ ಕಾನೂನು ಬಾಹಿರ ನಿಯಮ ಅನ್ವಯವಾಗುತ್ತದೆ. ಸಭಾಪತಿ ಬಂದಾಗ ಬಾಗಿಲು ಮುಚ್ಚಿ ಉಪಸಭಾಪತಿ‌ ಕೂತಿದ್ದೇ ಮಹಾಪರಾಧ. ಕಾನೂನುಬಾಹಿರ ಎಂದು ಹೇಳಿದರು.

ಇದು ಕಾನೂನು ಸಚಿವ ಮಾಧುಸ್ವಾಮಿ ಫ್ಲಾನ್. ರಾತ್ರಿಯೇ ಇಂತಹ ಫ್ಲಾನ್ ಮಾಡಿದ್ದಾರೆ. ಇನ್ನೂ ಬೆಲ್ ಮಾಡುವ ಮುನ್ನವೇ ಡೆಪ್ಯೂಟಿ ಚೇರ್ಮನ್ ಕೂರಿಸಿದ್ದಾರೆ. ಸದನದ ಪ್ರೊಸೀರ್ ನಂತೆ ಅವರು ನಡೆದುಕೊಳ್ಳಬೇಕು. ನೊಟೀಸ್ ಕೊಟ್ಟ ಮೇಲೆ 14 ದಿನದಲ್ಲಿ ಅಜೆಂಡಾದಲ್ಲಿ ತರಬೇಕು. ಅಜೆಂಡಾದಲ್ಲಿ ಯಾವಾಗ ತರಬೇಕು ಅನ್ನೋದು ಚೇರ್ಮನ್ ಗೆ ಸೇರಿದ್ದು. ಈಗ ಏನಾಗುತ್ತೆ ಕಾದು ನೊಡೋಣ. ನಾವು ಎಲ್ಲದಕ್ಕೂ ರೆಡಿಯಿದ್ದೇವೆ ಎಂದರು.

Comments are closed.