ಕರ್ನಾಟಕ

ಕೊರೊನಾ ಲಸಿಕೆ ಹೆಸರಲ್ಲಿ ಸಾವಿರಾರು ನಕಲಿ ʼವೆಬ್​ಸೈಟ್ʼ​ಗಳು

Pinterest LinkedIn Tumblr


ಬೆಂಗಳೂರು: ಕೊರೊನಾಗೆ ಲಸಿಕೆ ಸಿಕ್ಕಿತು ಎಂದು ಡಾರ್ಕ್‌ನೆಟ್‌ನಲ್ಲಿ ನಕಲಿ ವೆಬ್‌ಸೈಟ್ ತೆರೆದು ಲಸಿಕೆ ಮಾರಾಟದ ಸೋಗಿನಲ್ಲಿ ವಂಚನೆ ಮಾಡಲು ಸೈಬರ್ ಕಳ್ಳರು ಅವಣಿಸುತ್ತಿದ್ದಾರೆ.

ಜಾಗತಿಕ ಸೈಬರ್ ಸೆಕ್ಯೂರಿಟಿ ಸಂಸ್ಥೆಯಾದ ಚೆಕ್ ಪಾಯಿಂಟ್ ಸಂಶೋಧನೆ ಕೇಂದ್ರ ಇತ್ತೀಚೆಗೆ ಬೆಚ್ಚಿ ಬೀಳಿಸುವ ಅಂಶವೊಂದನ್ನ ಬಿಡುಗಡೆ ಮಾಡಿದ್ದು, ಕೋವಿಡ್-19ನೇ ಲಸಿಕೆಯನ್ನ ಮುಂದಿಟ್ಟುಕೊಂಡ ಸೈಬರ್ ಕಳ್ಳರು, ನವೆಂಬರ್‌ನಲ್ಲಿ ಡಾರ್ಕ್ ವೆಬ್‌ಸೈಟ್‌ನಲ್ಲಿ 1 ಸಾವಿರಕ್ಕೂ ಅಧಿಕ ವೆಬ್‌ಸೈಟ್ ನೋಂದಣಿ ಮಾಡಿಕೊಂಡಿದ್ದಾರೆ. ಹಾಗಾಗಿ ಇಲ್ಲಿಯವರೆಗೂ ನೋಂದಣಿ ಆಗಿರುವ ವೆಬ್‌ಸೈಟ್‌ಗಳಲ್ಲಿ 1062 ವೆಬ್‌ಸೈಟ್‌ಗಳು ವ್ಯಾಕ್ಸಿನ್ ಎಂಬ ಪದ ಬಳಕೆ ಮಾಡಿದ್ದು, 400 ವೆಬ್‌ಸೈಟ್‌ಗಳನ್ನು ಕೋವಿಡ್ ಎಂಬ ಪದ ಬಳಕೆ ಮಾಡಲಾಗಿದೆ.

ಡಾರ್ಕ್ ನೆಟ್‌ನಲ್ಲಿ ಆಕರ್ಷಕ ಜಾಹೀರಾತುಗಳನ್ನ ನೀಡುತ್ತಿರುವ ವೆಬ್‌ ಸೈಟ್‌ʼಗಳು ಆಫ್​​ಲೈನ್ ಮತ್ತು ಆನ್‌ಲೈನ್‌ನಲ್ಲಿಯೂ ಲಸಿಕೆ ದೊರೆಯಲಿದೆ. ಆದ್ರೆ, ಇದಕ್ಕೆ ಹಣ ವರ್ಗಾವಣೆ ಮಾಡ್ಬೇಕು ಎಂದು ಜನರನ್ನ ನಂಬಿಸುತ್ತೀವೆ. ಹಾಗಾಗಿ ಇಂತಹ ಸುಳ್ಳು ಜಾಹೀರಾತುಗಳನ್ನ ನಂಬಿ ಮೋಸ ಹೋಗ್ಬೇಡಿ ಎಂದು ಸೈಬರ್ ಸೆಕ್ಯೂರಿಟಿ ಸಂಸ್ಥೆ ಸಲಹೆ ನೀಡಿದೆ. ಹಾಗಾಗಿ ಸಾರ್ವಜನಿಕರು ಇಂತಹ ವೆಬ್ಸೈಟ್‌ʼಗಳನ್ನ ನಂಬಿ ಮೋಸ ಹೋಗದಿರಿ.

Comments are closed.