ಅಂತರಾಷ್ಟ್ರೀಯ

ಯುವಿ-ಎಲ್‌ಇಡಿಗಳು ಕೊರೋನವನ್ನು ಕೊಲ್ಲಬಲ್ಲವು: ನೂತನ ಅಧ್ಯಯನ

Pinterest LinkedIn Tumblr


ನ್ಯೂಯಾರ್ಕ್: ಯುವಿ-ಎಲ್‌ಇಡಿಗಳು ಕೊರೋನವನ್ನು ಕೊಲ್ಲಬಲ್ಲವು ಎಂದು ಅಧ್ಯಯನವೊಂದು ತಿಳಿಸಿದೆ. ಈ ತಂತ್ರಜ್ಞಾನವನ್ನು ವಾತಾನುಕೂಲಿ ಮತ್ತು ನೀರಿನ ವ್ಯವಸ್ಥೆಗಳಲ್ಲಿ ಅಳವಡಿಸಬಹುದಾಗಿದೆ ಎಂದು ಅದು ಹೇಳಿದೆ.

ಈ ಸಂಶೋಧನೆಯಲ್ಲಿ ಕೊರೋನ ವೈರಸ್‌ಗಳ ಕುಟುಂಬಕ್ಕೆ ಸೇರಿದ ವೈರಸೊಂದರ ಮೇಲೆ ವಿವಿಧ ವೇವ್‌ಲೆಂತ್‌ಗಳ ಯುವಿ-ಎಲ್‌ಇಡಿ ವಿಕಿರಣವನ್ನು ಹಾಯಿಸಿ ಪರಿಣಾಮವನ್ನು ಅಂದಾಜಿಸಲಾಗಿದೆ ಎಂದು ‘ಜರ್ನಲ್ ಆಫ್ ಫೋಟೊಕೆಮಿಸ್ಟ್ರಿ ಆಯಂಡ್ ಫೋಟೊಬಯಾಲಜಿ ಬಿ: ಬಯಾಲಜಿ’ಯಲ್ಲಿ ಪ್ರಕಟಗೊಂಡ ಸಂಶೋಧನಾ ವರದಿ ತಿಳಿಸಿದೆ.

”ಈ ತಂತ್ರಜ್ಞಾನವನ್ನು ಬಸ್, ರೈಲು, ಕ್ರೀಡಾಂಗಣ ಮತ್ತು ವಿಮಾನಗಳನ್ನು ಕೊರೋನ ವೈರಸ್‌ಮುಕ್ತಗೊಳಿಸಲು ಬಳಸಬಹುದಾಗಿದೆ. ಈಗ ಸಾಮಾನ್ಯವಾಗಿ ರಾಸಾಯನಿಕಗಳನ್ನು ಸಿಂಪಡಿಸುವ ಮೂಲಕ ಇವುಗಳನ್ನು ಕ್ರಿಮಿಮುಕ್ತಗೊಳಿಸಲಾಗುತ್ತಿದೆ. ಈ ರೀತಿಯ ಸಿಂಪಡಣೆಗೆ ಮಾನವಶ್ರಮ ಮತ್ತು ಹೆಚ್ಚಿನ ಸಮಯದ ಅಗತ್ಯವಿದೆ” ಎಂದು ಅಮೆರಿಕದಲ್ಲಿರುವ ‘ಅಮೆರಿಕನ್ ಫ್ರೆಂಡ್ಸ್ ಆಫ್ ಟೆಲ್ ಅವೀವ್ ಯುನಿವರ್ಸಿಟಿ’ಯಲ್ಲಿ ನಡೆಸಲಾದ ಅಧ್ಯಯನದ ಸಹ ಲೇಖಕಿ ಹಡಾಸ್ ಮಾಮನೆ ಹೇಳಿದ್ದಾರೆ.

Comments are closed.