ಕರ್ನಾಟಕ

ವರ್ತೂರು ಪ್ರಕಾಶ್ ಅಪಹರಣ ಪ್ರಕರಣ: ಪ್ರಮುಖ ಆರೋಪಿ ಆರೆಸ್ಟ್

Pinterest LinkedIn Tumblr


ಬೆಂಗಳೂರು : ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಪ್ರಮುಖ ಆರೋಪಿ ಕವಿರಾಜ್ ಎಂಬಾತನನ್ನು ಪೊಲೀಸರು ತಮಿಳುನಾಡಿನ ಮದುರೈ ಸಮೀಪದ ಗ್ರಾಮವೊಂದರಲ್ಲಿ ಬಂಧಿಸಿದ್ದಾರೆ.

ಆರೋಪಿಯನ್ನು ನ್ಯಾಯಾಂಗ ಬಂಧನದಿಂದ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಆರೋಪಿ ಕವಿರಾಜ್ ಗೆ, ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಡಿವೈಎಸ್ಪಿ ಸಾಹಿಲ್ ಬಾಂಗ್ಲಾ ಸಮ್ಮುಖದಲ್ಲಿ ಆರೋಗ್ಯ ತಪಾಸಣೆ ಮಾಡಿಸಲಾಯಿತು. ನಂತರ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ.

ಕೋಲಾರ ಬೆಗ್ಲಿಹೊಸಹಳ್ಳಿ ಬಳಿ ಮಾಜಿ ಸಚಿವ ವರ್ತೂರು ಪ್ರಕಾಶ್ ಕಾರು ಅಡ್ಡಗಟ್ಟಿದ್ದ 2 ಕಾರುಗಳಲ್ಲಿದ್ದ 8 ಮಂದಿ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ವರ್ತೂರು ಪ್ರಕಾಶ್ ಹಾಗೂ ಚಾಲಕ ಸುನೀಲ್ ಅವರನ್ನ ಕಿಡ್ನಾಪ್ ಮಾಡಿದ್ದರು. ನವೆಂಬರ್ 25 ರಂದು ಘಟನೆ ನಡೆದಿತ್ತು. ಬಳಿಕ ನಯಾಜ್ ಎನ್ನುವವರಿಂದ 48 ಲಕ್ಷ ಹಣ ನೀಡಿದ ಬಳಿಕ, ವರ್ತೂರು ಪ್ರಕಾಶ್‍ರನ್ನು ಬಿಡುಗಡೆ ಮಾಡಿದ್ದಾಗಿ ಘಟನೆ ನಡೆದ ನಾಲ್ಕು ದಿನಗಳ ನಂತರ ವರ್ತೂರು ಪ್ರಕಾಶ್ ಬೆಂಗಳೂರಿನ ಬೆಳ್ಳಂದೂರಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ, ತಮ್ಮ ಕಾರು ಪತ್ತೆಯಾದ ನಂತರ ದೂರು ನೀಡಿದ್ದರು.

Comments are closed.