ಕರ್ನಾಟಕ

ಪ್ರೇಮಾಂಕುರವಾಗಿ ದೈಹಿಕ ಸಂಪರ್ಕ: ಸಬ್ ಇನ್ಸ್ಪೆಕ್ಟರ್ ವಿರುದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್‌ರಿಂದಲೇ ದೂರು

Pinterest LinkedIn Tumblr


ಮೈಸೂರು: ಅವರಿಬ್ಬರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗಳು. ಇಬ್ಬರ ನಡುವೆ ಪ್ರೇಮಾಂಕುರವಾಗಿ ದೈಹಿಕ ಸಂಪರ್ಕವು ಬೆಳೆದಿದೆ. ಇದೀಗ ಇನ್ಪೆಕ್ಟರ್ ವಂಚನೆ ಮಾಡಿದ್ದಾನೆ ಎಂದು ಮಹಿಳಾ ಸಬ್ ಇನ್ಪೆಕ್ಟರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಮೈಸೂರಿನಲ್ಲಿ ನಡೆದಿರುವ ಈ ಘಟನೆ ಇದೀಗ ಇಡೀ‌ ಇಲಾಖೆಯಲ್ಲೆ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಆತನ ಹೆಸರು ಆನಂದ್. ಈತ ಮೈಸೂರಿನ ಎನ್.ಆರ್. ಪೊಲೀಸ್ ಠಾಣೆ ಸಬ್ ಇನ್ಪೆಕ್ಟರ್ ಆಗೆ ಕೆಲಸ ಮಾಡುತ್ತಿದ್ದಾರೆ.‌ ಈಕೆ ರಾಧ ಮೈಸೂರಿನ ವಿವಿ ಪುರಂ ಠಾಣೆಯಲ್ಲಿ ಸಬ್ ಇನ್ಪೆಕ್ಟರ್. ಇಬ್ಬರು ಒಂದೆ ಬ್ಯಾಚ್ ಮೆಟ್ ಗಳು. ಇಬ್ಬರು ಒಂದೆ ಕಡೆ ತಮ್ಮ ಟ್ರೈನಿಂಗ್ ಸಹ‌ ಮುಗಿಸಿ ಪ್ರೊಬೆಷನರಿ ಅವಧಿಯನ್ನ ಮುಗಿಸಿದ್ದರೆ. ಈ ವೇಳೆ ನಡುವೆ ಇದ್ದ ಸ್ನೇಹ ಪ್ರೀತಿ ಬದಲಾಗಿದೆ. ಇಬ್ಬರು ಪ್ರೇಮ ಪಕ್ಷಿಗಳಂತೆ ಊರೆಲ್ಲ ಸತ್ತಾಡಿದ್ದಾರೆ.

ಅಷ್ಟಕ್ಕೆ ಸಾಲದ್ದು ಅಂತ ಇಬ್ಬರ ನಡುವೆ ದೈಹಿಕ ಸಂಪರ್ಕ ಕೂಡ ಇತ್ತಂತೆ. ಅಷ್ಟೇ ಅಲ್ಲದೆ ಸಬ್ ಇನ್ಪೆಕ್ಟರ್ ಗರ್ಭಿಣಿ ಸಹ ಆಗಿದ್ದರು ಎನ್ನಲಾಗಿದೆ. ಈ ವೇಳೆ ರಾಧ ಗರ್ಭಿಣಿ ಅಂತ ಗೊತ್ತಾದಾಗ, ಹಾರ್ಲಿಕ್ಸ್ ,ಡ್ರೈ ಪ್ರೂಟ್ಸ್, ವಿಟಮಿನ್ ಟ್ಯಾಬ್ಲೆಟ್ ಅಂತ ಕೊಟ್ಟು ಗರ್ಭಪಾತವನ್ನು ಮಾಡಿಸಿದ್ದಾರೆ ಎಂಬ ಆರೋಪ ಸಬ್​ ಇನ್ಸ್​ಪೆಕ್ಟರ್​ ಆನಂದ್​ ಮೇಲಿದೆ. ಸದ್ಯ ಆನಂದ್ ಇನ್ನೊಂದು ಮದುವೆಯಾಗಿರುವ ಬಗ್ಗೆಯು ರಾಧ‌ ದೂರು ನೀಡಿದ್ದು ತನಗೆ ನ್ಯಾಯ ಕೊಡಿಸಬೇಕು ಅಂತ ಸ್ವತಃ ಪೊಲೀಸ್ ಸಬ್ ಇನ್ಸ್ಪೆಕ್ಟರ್ ರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ದೂರಿನ ಸಾರಾಂಶ:
ನಾನು ಮೈಸೂರು ವಿವಿಬಪುರಂ ಠಾಣೆ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಮೈಸೂರು ನಗರದ ಎನ್.ಆರ್.ಠಾಣೆಯಲ್ಲಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಆನಂದ್ ಎಂಬುವವರು ನನಗೆ ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ್ದಾರೆ.ಹಲವು ಕಡೆ ನನ್ನನ್ನ ಕರೆದುಕೊಂಡು ಹೋಗಿ ಬಲವಂತವಾಗಿ ಲೈಂಗಿಕ ಸಂಪರ್ಕ ಮಾಡಿ ಗರ್ಭವತಿಯಾಗಿ ಮಾಡಿದ್ದಾರೆ. ನಾನು ಗರ್ಭಿಣಿ ಎಂಬುವ ವಿಚಾರ ತಿಳಿದ ಬಳಿಕ ಗರ್ಭಪಾತ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ದರು. ನಾನು ಇದಕ್ಕೆ ಒಪ್ಪದಿದ್ದಾಗ ಹಾರ್ಲಿಕ್ಸ್ ,ಡ್ರೈ ಪ್ರೂಟ್ಸ್ ಹಾಗೂ ವಿಟಮಿನ್ ಮಾತ್ರೆಗಳೆಂದು ನೀಡಿ ನನಗೆ ಗರ್ಭಪಾತ ಮಾಡಿಸಿದ್ದಾರೆ.

ಇದಾಗ್ಯೂ ನನ್ನನ್ನು ಮದುವೆ ಮಾಡಿಕೋ ಎಂದು ಕೇಳಿದಾಗ ಸಣ್ಣ ವಿಚಾರವನ್ನು ತೆಗೆದು ಜಗಳ ಮಾಡಿ ನನ್ನನ್ನ ಅಶ್ಲೀಲಾ ವಾಗಿ ನಿಂದಿಸಿದ್ದರು. ಅಷ್ಟೆ ಮದುವೆ ಮಾಡಿಕೋ ಎಂದಾಗ ಕೊಲೆ ಬೆದರಿಕೆ ಹಾಕಿದ್ದರು. ಇದೀಗಾ ಬೇರೊಂದು ಯುವತಿ ಜೊತೆ ಮದುವೆ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಿ ನನಗ ನ್ಯಾಯ ಕೊಡಿಸಿ.
-ದೂರುದಾರ ಪಿಎಸ್ ಐ- ರಾಧ.

ಸದ್ಯ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ. ಇನ್ನು ಪಿಎಸ್ ಐ ಆನಂದ್ ಕಳೆದ 15 ದಿನಗಳಿಂದ ರಜೆಯಲ್ಲಿರುವುದಾಗಿ ತಿಳಿದು ಬಂದಿದೆ. ಇಷ್ಟೆಲ್ಲ ವಿಚಾರ ದೂರು ದಾಖಲಾಗಿದ್ದು ಈ ಬಗ್ಗೆ ಮೈಸೂರು ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಮಾತ್ರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಒಟ್ಟಾರೆ ಪೊಲೀಸ್ ಅಧಿಕಾರಿಯೆ ಮತ್ತೊಬ್ಬ ಪೊಲೀಸ್ ಅಧಿಕಾರಿಗೆ ದೋಖ ಮಾಡಿರೋದು ವಿಪರ್ಯಾಸವೆ ಸರಿ. ನ್ಯಾಯ ಕೊಡಿಸಬೇಕಾದ ಅಧಿಕಾರಿಯೆ ಈ‌ರೀತಿ ದೋಖಾ ಮಾಡಿದ್ರೆ ಸಾರ್ವಜನಿಕರೊಗಿ ಯಾವ ರೀತಿ ನ್ಯಾಯ ಕೊಡಿಸುತ್ತಾರೆ ಎಂಬ ಪ್ರಶ್ನೆ ಮೂಡಿದೆ.

Comments are closed.