ರಾಷ್ಟ್ರೀಯ

ರೈತರು ನಡೆಸುತ್ತಿರುವ ವ್ಯಾಪಕ ಪ್ರತಿಭಟನೆಗಳ ಹಿಂದೆ ಚೀನಾ ಮತ್ತು ಪಾಕಿಸ್ತಾನ ಗಳ ಕೈವಾಡ: ಬಿಜೆಪಿ ಸಚಿವ ರಾವ್ ಸಾಹೇಬ್ ಧನ್ವೆ

Pinterest LinkedIn Tumblr


ನವದೆಹಲಿ : ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸುತ್ತಿರುವ ಹೋರಾಟದ ಹಿಂದೆ ಚೀನಾ ಮತ್ತು ಪಾಕ್ ಗಳ ಕೈವಾಡವಿದೆ ಎಂದು ಕೇಂದ್ರ ಸಚಿವ ರಾವ್‌ಸಾಹೇಬ್‌ ಡಾನ್ವೆ ಆರೋಪಿಸಿದ್ದಾರೆ.

ಮಹಾರಾಷ್ಟ್ರದ ಜಲ್ನಾ ಜಿಲ್ಲೆಯಲ್ಲಿ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ‘ನಡೆಯುತ್ತಿರುವ ಹೋರಾಟ ರೈತರದ್ದಲ್ಲ. ಇದರ ಹಿಂದೆ ಚೀನಾ ಮತ್ತು ಪಾಕಿಸ್ತಾನ ಗಳ ಕೈವಾಡವಿದೆ. ಈ ದೇಶದಲ್ಲಿ ಮೊದಲು ಮುಸ್ಲಿಮರನ್ನು ಪ್ರಚೋದಿಸಲಾಗುತ್ತಿತ್ತು. ಇದೀಗ ರೈತರನ್ನು ಪ್ರಚೋದಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಚೀನಾ ಮತ್ತು ಪಾಕಿಸ್ತಾನ ಗಳು ರೈತರ ಪ್ರತಿಭಟನೆಗಳಿಗೆ ಕಾರಣ ಎಂದು ಕೇಂದ್ರ ಸಚಿವ ರಾವಸಾಹೇಬ್ ದಾನ್ವೆ ಆರೋಪಿಸಿದ ಮರುದಿನವೇ ಶಿವಸೇನೆ ಸಂಸದ ಸಂಜಯ್ ರಾವುತ್ ಅವರು, ರಕ್ಷಣಾ ಸಚಿವರು ಕೂಡಲೇ ನೆರೆಯ ಎರಡು ದೇಶಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು ಎಂದು ಹೇಳಿದ್ದಾರೆ.

‘ರೈತರ ಹೋರಾಟದ ಹಿಂದೆ ಚೀನಾ ಮತ್ತು ಪಾಕಿಸ್ತಾನ ಕೈವಾಡವಿದೆ ಎಂಬ ಮಾಹಿತಿ ಕೇಂದ್ರ ಸಚಿವಬಳಿ ಇದ್ದರೆ, ರಕ್ಷಣಾ ಸಚಿವರು ಕೂಡಲೇ ಚೀನಾ ಮತ್ತು ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಬೇಕು’ ಎಂದು ಶಿವಸೇನೆ ನಾಯಕ ಹೇಳಿದ್ದಾರೆ.

Comments are closed.