ಮೈಸೂರು : ಅಲ್ಲಿ ಮದುವೆಯ ಸಂಭ್ರಮ, ಹೊಸ ಬಾಳಿಗೆ ಅಡಿ ಇಡಬೇಕಾಗಿದ್ದ ವಧು ನೂರಾರು ಕನಸು ಕಂಡು ಇನ್ನೇನು ತಾಳಿ ಕಟ್ಟಿಸಿಕೊಳ್ಳಬೇಕು ಆದರೆ ಅಲ್ಲಿ ಆಗಿದ್ದೇ ಬೇರೆ. ವಧುವಿಗೆ ಕೈಕೊಟ್ಟು ಪ್ರೇಯಸಿಯೊಂದಿಗೆ ವರ ಪರಾರಿಯಾಗಿರುವ ಘಟನೆ ನಗರದ ಕೆ.ಆರ್. ಮೊಹಲ್ಲಾದಲ್ಲಿ ನಡೆದಿದೆ.
ಮೈಸೂರಿನ ಸುಣ್ಣದಕೇರಿಯ ಉಮೇಶ್ ಪರಾರಿಯಾದ ವರ. ಇಂದು ಅನಾಮಿಕ (ಹೆಸರು ಬದಲಾಯಿಸಲಾಗಿದೆ) ಹಾಗೂ ಉಮೇಶ್ ಮದುವೆ ಕಾರ್ಯಕ್ರಮ ನಡೆಯಬೇಕಿತ್ತು ಆದರೆ ಉಮೇಶ್ ತನ್ನ ಲವರ್ ಜೊತೆಗೆ ಓಡಿ ಹೋಗಿದ್ದಾನೆ.
ಸದ್ಯ ವರ ಉಮೇಶ್ ಕುಟುಂಬಸ್ಥರು ವಧು ಕುಟುಂಬಕ್ಕೆ 5 ಲಕ್ಷ ಹಣ ಕೊಡುವುದಾಗಿ ಹೇಳುತ್ತಿದ್ದಾರೆ. ಕಲ್ಯಾಣಮಂಟಪದಲ್ಲಿ ವಧುವಿನ ಕುಟುಂಬಸ್ಥರು ಕಂಗಾಲಾಗಿದ್ದು, ಈ ಕುರಿತು ಕೆ.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.