ಅಂತರಾಷ್ಟ್ರೀಯ

ಆಕ್ಸ್​ಫರ್ಡ್ ಲಸಿಕೆ ಕೊರೊನಾ ವಿರುದ್ಧ ಪರಿಣಾಮಕಾರಿ: ದಿ ಲ್ಯಾನ್ಸೆಟ್​ನಲ್ಲಿ ಪ್ರಕಟವಾದ ಪ್ರಾಯೋಗಿಕ ಫಲಿತಾಂಶಗಳ ಹೇಳಿಕೆ

Pinterest LinkedIn Tumblr


ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಹಾಗೂ ಆಸ್ಟ್ರೇಜೆನಿಕಾ ಪಿಎಲ್​ಸಿ ಅಭಿವೃದ್ಧಿಪಡಿಸಿದ ಲಸಿಕೆ ಸುರಕ್ಷಿತ ಹಾಗೂ ಪರಿಣಾಮಕಾರಿ ಎಂದು ಮಂಗಳವಾರ ದಿ ಲ್ಯಾನ್ಸೆಟ್​ನಲ್ಲಿ ಪ್ರಕಟವಾದ ಪ್ರಾಯೋಗಿಕ ಫಲಿತಾಂಶಗಳು ಹೇಳಿವೆ.

ಆದರೆ, ಕೊರೊನಾ ವೈರಸ್​ನಿಂದ ಅಪಾಯದಲ್ಲಿರುವ 55 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಈ ಲಸಿಕೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತೆ ಅನ್ನೋದಕ್ಕೆ ಹೆಚ್ಚಿನ ವಿಶ್ಲೇಷಣೆಯ ಅಗತ್ಯವಿದೆ. ಯಾಕಂದ್ರೆ ಈ ಲಸಿಕೆಗಳನ್ನ ಮೊದಲು ಕಿರಿಯರ ಮೇಲೆ ಪ್ರಯೋಗಿಸಿ ಬಳಿಕ ವಯಸ್ಕರ ಮೇಲೆ ಪ್ರಯೋಗಿಸಲಾಗಿತ್ತು. ಹಾಗಾಗಿ ವೃದ್ಧರ ಮೇಲೆ ಲಸಿಕೆ ಪರಿಣಾಮವನ್ನ ಅಧ್ಯಯನ ಮಾಡೋಕೆ ಸಾಕಷ್ಟು ಸಮಯ ಸಿಕ್ಕಿರಲಿಲ್ಲ ಅಂತಾ ಆಕ್ಸ್​ಫರ್ಡ್​ ಲಸಿಕೆ ತನಿಖಾಧಿಕಾರಿ ಆಂಡ್ರ್ಯೂ ಪೊಲಾರ್ಡ್​ ಹೇಳಿದ್ದಾರೆ. 55 ವರ್ಷ ಮೇಲ್ಪಟ್ಟವರಿಗೂ ಈ ಲಸಿಕೆ ಸೂಕ್ತವಾಗುತ್ತೆ ಅಂತಾ ಅಂದಾಜು ಮಾಡಲಾಗಿದೆಯೇ ಹೊರತು ಯಾವುದೇ ನಿಖರ ಫಲಿತಾಂಶ ದೊರಕಿಲ್ಲ.

ಇನ್ನು ಬ್ರಿಟನ್​ನಲ್ಲಿ ಅನುಮೋದನೆಗೊಂಡಿರುವ ಫೈಜರ್​ ಲಸಿಕೆಗಳನ್ನ ಯುರೋಪ್​ ಹಾಗೂ ಅಮೆರಿಕದಲ್ಲಿ ಶೀಘ್ರವೇ ಅನುಮೋದನೆ ನೀಡುವ ಸಾಧ್ಯತೆ ಇದೆ. ಮೊಡರ್ನಾ ಲಸಿಕೆಗೆ ಹೋಲಿಸಿದ್ರೆ ಆಕ್ಸ್​ಫರ್ಡ್​ ಲಸಿಕೆ ಕಡಿಮೆ ಪರಿಣಾಮಕಾರಿಯಾಗಿದೆ ಅನ್ನೋದು ಪ್ರಯೋಗಗಳ ಫಲಿತಾಂಶದಲ್ಲಿ ತಿಳಿದು ಬಂದಿದೆ.

Comments are closed.