ಕರ್ನಾಟಕ

ದುಬೈನಲ್ಲಿ ಸಂಪಾದಿಸಿದ ದುಡ್ಡನ್ನು ಕಬಳಿಸಿದ ಸಂಬಂಧಿಕರು; ಸೆಲ್ಫಿ ವಿಡಿಯೋ ಮಾಡಿ ಮಹಿಳೆ ಆತ್ಮಹತ್ಯೆಗೆ ಯತ್ನ

Pinterest LinkedIn Tumblr

ಬೆಂಗಳೂರು: ದುಬೈನಲ್ಲಿ ಸಂಪಾದಿಸಿದ ದುಡ್ಡನ್ನು ಸಂಬಂಧಿಕರು ಕಬಳಿಸಿದ್ದರಿಂದ ನೊಂದ ಮಹಿಳೆಯೊಬ್ಬರು ಸೆಲ್ಫಿ ವಿಡಿಯೊ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಬೆಂಗಳೂರು ಅರುಂಧತಿ ನಗರದ ಫಾತಿಮಾ (30) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಕೆಲ ವರ್ಷ ದುಬೈನಲ್ಲಿ ಮನೆ ಗೆಲಸ ಮಾಡಿ 9 ಲಕ್ಷ ರೂ. ಹಣ ದುಡಿದಿದ್ದರು. ಸ್ವಲ್ಪ ಹಣವನ್ನು ಸಹೋದರಿಗೆ ಕೊಟ್ಟಿದ್ದರು. ಸಹೋದರಿಯ ಪುತ್ರ ಸೈಯದ್ದ ಖಲೀಲ್‌ ಫಾತಿಮಾಗೆ ಗೊತ್ತಿಲ್ಲದಂತೆ ಎಟಿಎಂನಿಂದ 3 ಲಕ್ಷ ರೂ. ಹಣವನ್ನು ಹಂತ ಹಂತವಾಗಿ ಡ್ರಾ ಮಾಡಿದ್ದಾನೆ.

ಹಣ ವಾಪಸು ಕೇಳಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಸಂಬಂಧ ಠಾಣೆಯಲ್ಲಿ ದೂರು ದಾಖಲಿಸಿದರೂ ಹಣ ವಾಪಸು ಬಂದಿರಲಿಲ್ಲ. ಇದರಿಂದಾಗಿ ಪುಟ್ಟ ಮಕ್ಕಳ ಎದುರೇ ಫಾತಿಮಾ ಸೆಲ್ಫಿ ವಿಡಿಯೊ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Comments are closed.