ಮನೋರಂಜನೆ

ಆಳಿಯ ಕೃಷ್ಣ ಅಭಿಷೇಕ್‌ ರಿಂದ ಅವಳಿ ಮಕ್ಕಳ ವಿಷಯದಲ್ಲಿ ದೊಡ್ಡ ಆರೋಪ: ಬಾಲಿವುಡ್ ನಟ ಗೋವಿಂದ್ ಸ್ಪಷ್ಟನೆ

Pinterest LinkedIn Tumblr


ಮುಂಬೈ: ಬಾಲಿವುಡ್‌ನ ಖ್ಯಾತ ನಟ ಗೋವಿಂದ ಅವರ ಮೇಲೆ ಆರೋಪವೊಂದು ಕೇಳಿಬಂದಿದೆ. ಅದರ ಬಗ್ಗೆ ಅವರೀಗ ಸ್ವಷ್ಟನೆ ನೀಡಿದ್ದಾರೆ.

ಹಲವು ಸಿನಿಮಾಗಳಲ್ಲಿ ತಮ್ಮ ಭಿನ್ನವಾದ ಮ್ಯಾನರಿಸಂ ಮೂಲಕ ಪ್ರೇಕ್ಷಕರನ್ನು ನಕ್ಕು ನಗಿಸಿರುವ ನಟ ಗೋವಿಂದ ಒಂದು ದೊಡ್ಡ ಆರೋಪ ಎದುರಿಸುತ್ತಿದ್ದಾರೆ. ಹಾಗಂತ ಈ ಆರೋಪ ಮಾಡುತ್ತಿರುವುದು ಬೇರೆ ಯಾರೋ ಮೂರನೇ ವ್ಯಕ್ತಿ ಅಲ್ಲ. ಬದಲಿಗೆ, ಸ್ವತಃ ಅವರ ಅಳಿಯ ಕೃಷ್ಣ ಅಭಿಷೇಕ್‌ ಕೆಲವು ಆರೋಪ ಹೊರಿಸಿದ್ದಾರೆ. ಅದು ಈಗ ಎಲ್ಲೆಡೆ ಚರ್ಚೆ ಆಗುತ್ತಿದೆ.

ನಟ ಕೃಷ್ಣ ಅಭಿಷೇಕ್‌ ಹಿಂದಿ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಅವರು ಪ್ರಸ್ತುತ ‘ದಿ ಕಪಿಲ್‌ ಶರ್ಮಾ ಶೋ’ ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದನಾಗಿ ವೀಕ್ಷಕರನ್ನು ರಂಜಿಸುತ್ತಿದ್ದಾರೆ. ಅವರ ಪತ್ನಿ ಕಾಶ್ಮಿರಾ ಶಾ ಕೂಡ ನಟಿ. ಈ ದಂಪತಿಗೆ ಅವಳಿ ಮಕ್ಕಳಿವೆ. ಬಾಡಿಗೆ ತಾಯಿ ಮೂಲಕ ಪಡೆದ ಈ ಮಕ್ಕಳ ಆರೋಗ್ಯದಲ್ಲಿ ಇತ್ತೀಚೆಗೆ ಏರುಪೇರಾಗಿತ್ತು. ಅದೇ ಈಗ ಚರ್ಚೆಗೆ ಕಾರಣ ಆಗಿದೆ.

ತಮ್ಮ ಇಬ್ಬರು ಮಕ್ಕಳು ಅನಾರೋಗ್ಯದಿಂದ ಬಳಲುತ್ತಿದ್ದಾಗ ಗೋವಿಂದ ನೋಡಲು ಬರಲಿಲ್ಲ ಎಂದು ಕೃಷ್ಣ ಆರೋಪಿಸಿದ್ದಾರೆ. ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದರೂ ಕೂಡ ತಮಗೆ ಗೋವಿಂದ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಕೃಷ್ಣ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಅವರು ಹೇಳಿಕೆ ನೀಡಿರುವುದು ಗೋವಿಂದಗೆ ಸಖತ್‌ ಬೇಸರ ತರಿಸಿದೆ. ಮಕ್ಕಳ ವಿಚಾರದಲ್ಲಿ ತಾವೇನು ಮಾಡಿದ್ದೇವೆ ಎಂಬುದನ್ನು ಗೋವಿಂದ ಈಗ ವಿವರಿಸಿದ್ದಾರೆ.

‘ಈಗ ಸತ್ಯ ಹೊರಬರಲೇಬೇಕು. ನಾನು ಮತ್ತು ನನ್ನ ಕುಟುಂಬದವರು ಆ ಮಕ್ಕಳನ್ನು ನೋಡಲು ಆಸ್ಪತ್ರೆಗೆ ಹೋಗಿದ್ದೆವು. ಅಲ್ಲಿ ಡಾಕ್ಟರ್‌ ಮತ್ತು ನರ್ಸ್‌ಗಳನ್ನು ಭೇಟಿ ಮಾಡಿದೆವು. ಆದರೆ ತಮ್ಮ ಮಕ್ಕಳನ್ನು ನೋಡಲು ಯಾರಿಗೂ ಅನುಮತಿ ನೀಡಬಾರದು ಎಂದು ವೈದ್ಯರಿಗೆ ಕಾಶ್ಮಿರಾ ಶಾ ತಾಕೀತು ಮಾಡಿದ್ದರಿಂದ ನಾವು ದೂರದಿಂದಲೇ ಮಕ್ಕಳನ್ನು ನೋಡಬೇಕಾಯಿತು. ಭಾರವಾದ ಮನಸ್ಸಿನಿಂದ ನಾವು ಅಲ್ಲಿಂದ ವಾಪಸ್‌ ಬಂದೆವು. ಈ ಸತ್ಯ ಪ್ರಾಯಶಃ ಕೃಷ್ಣಗೆ ಗೊತ್ತಿಲ್ಲ ಎನಿಸುತ್ತದೆ’ ಎಂದು ಗೋವಿಂದ ಹೇಳಿದ್ದಾರೆ. ಒಟ್ಟಿನಲ್ಲಿ ಈ ಬಾಲಿವುಡ್‌ ನಟರ ಕುಟುಂಬದ ಒಳ ಜಗಳ ಈಗ ಬೀದಿಗೆ ಬಂದಿದೆ.

Comments are closed.