ಕರ್ನಾಟಕ

ಶೀಘ್ರದಲ್ಲಿ SSLC – PUC ವಿದ್ಯಾರ್ಥಿಗಳ ಪರೀಕ್ಷಾ ದಿನಾಂಕ ಪ್ರಕಟ!: ಸುರೇಶ್ ಕುಮಾರ್

Pinterest LinkedIn Tumblr


ಬೆಂಗಳೂರು: ಕರೋನಾದಿಂದಾಗಿ ಈ ವರ್ಷ 1ರಿಂದ 8ನೇ ತರಗತಿವರೆಗೆ ಶೈಕ್ಷಣಿಕ ವರ್ಷ ಇಲ್ಲ. ಆದರೆ ಬೋರ್ಡ್ ಪರೀಕ್ಷೆ ಇರುವುದರಿಂದ SSLC ಹಾಗೂ ದ್ವಿತೀಯ ಪಿಯು ಪರೀಕ್ಷಾ ದಿನಾಂಕಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುರೇಶ್ ಕುಮಾರ್(Suresh Kumar), ಡಿಸೆಂಬರ್ ಅಂತ್ಯದವರೆಗೂ ಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳು ತೆರೆಯುವುದಿಲ್ಲ. ಡಿಸೆಂಬರ್ ನಂತರ ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸಲಾಗುವುದು. ಈ ವರ್ಷ 1-8ನೇ ತರಗತಿವರೆಗೆ ಶಾಲೆ ತೆರೆಯುವ ಬಗ್ಗೆ ಯೋಚನೆಯೇ ಇಲ್ಲ. ಹಾಗಂತ ‘ಝಿರೋ ಇಯರ್’ ಎಂದು ಪರಿಗಣಿಸಲಾಗಲ್ಲ, ಬೇರೆ ಬೇರೆ ವಿಧಗಳಲ್ಲಿ ತರಗತಿಗಳು ನಡೆಯುತ್ತದೆ ಎಂದರು.

ಇನ್ನು SSLC ಹಾಗೂ ಪಿಯುಸಿ ಬೋರ್ಡ್ ಪರೀಕ್ಷೆ ಇರುವುದರಿಂದ ಪರೀಕ್ಷಾ ದಿನಾಂಕಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. 10ನೇ ತರಗತಿಯಲ್ಲಿ 9,59,566 ಮಕ್ಕಳು ಪರೀಕ್ಷೆ ಬರೆಯುವವರಿದ್ದಾರೆ. ಇನ್ನು ದ್ವಿತೀಯ ಪಿಯುಸಿಯಲ್ಲಿ 5,70,126 ಮಕ್ಕಳು ಪರೀಕ್ಷೆ ಬರೆಯಲಿದ್ದಾರೆ. ಹೀಗಾಗಿ ಮಕ್ಕಳಿಗೆ ಪ್ರೇರಣೆ, ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಪರೀಕ್ಷೆ ದಿನಾಂಕ ಪ್ರಕಟಿಸುತ್ತೇವೆ ಎಂದು ತಿಳಿಸಿದರು.

Comments are closed.