ಕರ್ನಾಟಕ

ವಿವಾಹಿತ ಮಹಿಳೆಗೆ ಹಳೆ ಪ್ರಿಯಕರನ ವಿಚಾರದಲ್ಲಿ 1.25 ಬ್ಲಾಕ್ ಮೇಲ್

Pinterest LinkedIn Tumblr


ಮಾಜಿ ಪ್ರಿಯಕರನ ಹೆಸರಿನಲ್ಲಿ ಮಹಿಳೆಗೆ 1.25 ಕೋಟಿ ರೂ. ಬ್ಲಾಕ್ ಮೇಲ್ ಮಾಡಿದ್ದ ಆರೋಪಿಗಳನ್ನ ಅರೆಸ್ಟ್ ಮಾಡಲಾಗಿದೆ. ಅಪರ್ಣಾ ಅಲಿಯಾಸ್ ಅನು, ಮಹೇಶ್ ಬಂಧಿತ ಆರೋಪಿಗಳು. ಹಣ ಕಳೆದುಕೊಂಡ ಮಹಿಳೆ ಮದುವೆಗೂ ಮುನ್ನ ಮಹೇಶ್​ ಎಂಬ ವ್ಯಕ್ತಿಯನ್ನ ಪ್ರೀತಿ ಮಾಡ್ತಿದ್ಲು. ಆದ್ರೆ ಪೋಷಕರ ಒತ್ತಾಯದ ಮೇರೆಗೆ ವೈಟ್ ಫೀಲ್ಡ್ ಉದ್ಯಮಿಯ‌ನ್ನ ಮದುವೆಯಾದ್ರು. ಕಾಲೇಜಿನಲ್ಲಿ ಅಪರ್ಣ ಹಾಗೂ ಸಂತ್ರಸ್ತ ಮಹಿಳೆ ಸ್ನೇಹಿತರಾಗಿದ್ರು. ಆದ್ರೆ, ಕಳೆದ ಒಂದು ವರ್ಷದಿಂದ ಮಹೇಶ್​ ಹೆಸರಿನಲ್ಲಿ ಅಪರ್ಣಾ , ಸಂತ್ರಸ್ತೆ ಜೊತೆ ಚಾಟ್ ಮಾಡ್ತಿದ್ಲು. ಅಲ್ದೆ ನಿನ್ನ ಹಳೇ ಪ್ರಿಯಕರನ ವಿಚಾರ ನನಗೆ ಗೊತ್ತು.

ನಾನು ಕೇಳಿದಷ್ಟು ಹಣ ನೀಡದಿದ್ರೆ, ನಿನ್ನ ಖಾಸಗಿ ಫೋಟೋ, ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡೋದಾಗಿ ಬೆದರಿಕೆ ಹಾಕಿದ್ಲು. ಇದ್ರಿಂದ ಆತಂಕಗೊಂಡ ಸಂತ್ರಸ್ತೆ, ಸ್ನೇಹಿತೆ ಅಪರ್ಣ ಅಕೌಂಟ್​ಗೆ ಹಣ ವರ್ಗಾವಣೆ ಮಾಡಿದ್ಲು. ಬಳಿಕ ಪತ್ನಿ ಯ ಆತಂಕ ಕಂಡು ಅನುಮಾನಗೊಂದ ಪತಿ, ಪತ್ನಿಗೆ ಕೌನ್ಸಿಲಿಂಗ್ ಮಾಡಿಸಿದ್ದ. ಈ ವೇಳೆ ಮಹಿಳೆ ತನಗಾದ ಅನ್ಯಾಯವನ್ನ ಬಾಯ್ಬಿಟ್ಟಿದ್ದಾಳೆ. ಇನ್ನು ಈ ಬಗ್ಗೆ ವೈಟ್​ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.