ನವದೆಹಲಿ: ಆಧಾರ್ ಕಾರ್ಡ್ ಗೆ ಹೆಚ್ಚುವರಿ ಸುರಕ್ಷತೆ ಒದಗಿಸಲು ಸರ್ಕಾರ ಇದರಲ್ಲಿ QR ಕೋಡ್ ಅಳವಡಿಸಿದೆ. ಇದರ ಸಹಾಯದಿಂದ ಕಾರ್ಡ್ ಬಳಕೆ ಇನ್ನಷ್ಟು ಸುಲಭವಾಗಿದೆ.
QR ಕೋಡ್ ಮೂಲಕ ನೀವು ಆಫ್ಲೈನ್ ನಲ್ಲಿಯೂ ಕೂಡ ಇದರ ಬಳಕೆ ಮಾಡಬಹುದು
ಪಿವಿಸಿ ಆಧಾರ್ ಕಾರ್ಡ್ ಗೆ ಇನ್ನಷ್ಟು ಹೆಚ್ಚು ಸುರಕ್ಷತೆ ಒದಗಿಸಲು ಸರ್ಕಾರ ಅದರಲ್ಲಿ QR ಕೋಡ್ ಅನ್ನು ಸೇರಿಸಿದೆ. ಈ QR ಕೋಡ್ ಅನ್ನು ನೀವು ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದಾಗ ನಿಮ್ಮ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ ಬರಲಿದೆ. ಇದರಲ್ಲಿ ವಿಶೇಷತೆ ಎಂದರೆ ಇದಕ್ಕಾಗಿ ನಿಮಗೆ ಯಾವುದೇ ರೀತಿಯ ಇಂಟರ್ನೆಟ್ ಕನೆಕ್ಷನ್ ಬೇಕಾಗುವುದಿಲ್ಲ. ಇಂತಹುದರಲ್ಲಿ ನೀವು ಸುಲಭವಾಗಿ ಯಾವುದೇ ಸರ್ಕಾರಿ ಯೋಜನೆಯ ಲಾಭ ಪಡೆಯಬಹುದಾಗಿದೆ. ಪಿವಿಸಿ ಕಾರ್ಡ್ ಮೇಲೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಮುದ್ರಿಸಲು ನೀವು 50 ರೂ.ಶುಲ್ಕ ನೀಡಬೇಕು. ಪಿವಿಸಿ ಕಾರ್ಡ್ ಒಂದು ರೀತಿಯ ಪ್ಲಾಸ್ಟಿಕ್ ಕಾರ್ಡ್ ಆಗಿದ್ದು, ಇದನ್ನು ನೀವು ಎಟಿಎಂ ಕಾರ್ಡ್, ಡೆಬಿಟ್-ಕ್ರೆಡಿಟ್ ಕಾರ್ಡ್ ಗಾಗಿ ಬಳಸಬಹುದು.
ಪಿವಿಸಿ ಆಧಾರ್ ಕಾರ್ಡ್ ಹೇಗೆ ತಯಾರಿಸಿಕೊಳ್ಳಬೇಕು
ಪಿವಿಸಿ ಆಧಾರ್ ಕಾರ್ಡ್ ಗಾಗಿ ಎಲ್ಲಕ್ಕಿಂತ ಮೊದಲು UIDAI ನ ಅಧಿಕೃತ ವೆಬ್ ಸೈಟ್ https://uidai.gov.inಗೆ ಭೇಟಿ ನೀಡಬೇಕು. ಇದಾದ ಬಳಿಕ ನೀವು My Aadhar Section ಮೇಲೆ ಕ್ಲಿಕ್ಕಿಸಬೇಕು. ನಂತರ Order Aadhar PVC Card ಆಪ್ಶನ್ ಅನ್ನು ಆಯ್ಕೆ ಮಾಡಬೇಕು. ಇದಾದ ಬಳಿಕ ನೀವು 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು. ನಂತರ ಸಿಕ್ಯೂರಿಟಿ ಕೋಡ್ ನಮೂದಿಸಲು ಕೇಳಲಾಗುವುದು. ಬಳಿಕ OTP ನಮೂದಿಸಿ ಸಬ್ಮಿಟ್ ಮಾಡಿ. ಈಗ ನಿಮ್ಮ ಸ್ಕ್ರೀನ್ ಮೇಲೆ ಆಧಾರ್ ನಲ್ಲಿರುವ ನಿಮ್ಮ ಮಾಹಿತಿ ತೆರೆದುಕೊಳ್ಳಲಿದೆ. ಇದಾದ ಬಳಿಕ ನಿಮಗೆ ಶುಲ್ಕ ಪಾವತಿಸಲು ಕೇಳಲಾಗುವುದು ಹಾಗೂ ನೀವು ರೂ.50 ಶುಲ್ಕ ಪಾವತಿಸುತ್ತಿದ್ದಂತೆ ನಿಮ್ಮ ಆರ್ಡರ್ ಪ್ಲೇಸ್ ಆಗಲಿದೆ ಹಾಗೂ ಕೆಲವೇ ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಮನೆ ವಿಳಾಸಕ್ಕೆ ಬರಲಿದೆ.