ಕರ್ನಾಟಕ

ದೀಪಾವಳಿ ನಂತರ ಸಚಿವ ಸಂಪುಟ ವಿಸ್ತರಣೆ; ಸಿ.ಟಿ.ರವಿ

Pinterest LinkedIn Tumblr


ಚಿಕ್ಕಮಗಳೂರು: ದೀಪಾವಳಿ ಹಬ್ಬದ ಬಳಿಕ ಸಿಎಂ ದೆಹಲಿಗೆ ಹೋಗಿ ಸಮಾಲೋಚನೆ ನಡೆಸಿ ರಾಜ್ಯ ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಬಿಂಡಿಗೆ ದೇವಿರಮ್ಮನ ಬೆಟ್ಟದಲ್ಲಿ ಮಾತನಾಡಿದ ಅವರು, ಸಿಎಂ ಮನದಲ್ಲಿ ಪುನರ್ ರಚನೆಯ ಯೋಜನೆ ಇದೆ. ಪುನರ್ ರಚನೆ ಅಥವಾ ವಿಸ್ತರಣೆಯೇ ಎಂಬುದು ವರಿಷ್ಠರ ಜೊತೆ ಚರ್ಚೆ ನಡೆಸಿ ಕ್ರಮಕೈಗೊಳ್ಳುತ್ತಾರೆ. ಜೊತೆಗೆ ಶೀಘ್ರದಲ್ಲೇ ಚಿಕ್ಕಮಗಳೂರಿಗೆ ಉಸ್ತುವಾರಿ ಸಚಿವರು ಬರ್ತಾರೆ ಎಂದರು.

ಬಿಹಾರದಲ್ಲಿ ನಾಲ್ಕನೇ ಬಾರಿಗೆ ನಿತೀಶ್ ಕುಮಾರ್ ಸರ್ಕಾರ ಜನಮನ್ನಣೆ ಗಳಿಸಿಕೊಳ್ಳೊದು ಅಷ್ಟು ಸುಲಭವಲ್ಲ. ಅವರು ಅದನ್ನು ಸಾಧಿಸಿದ್ದಾರೆ. ಪ್ರಧಾನಿ ಹಾಗೂ ನಿತೀಶ್ ಕುಮಾರ್ ನೇತೃತ್ವದಲ್ಲಿ ಡಬಲ್ ಇಂಜಿನ್ ಸರ್ಕಾರ ಬಂದಿದೆ. ಬಿಹಾರ ಜನರ ಕನಸ್ಸು ನನಸು ಮಾಡಲು ಶಕ್ತಿ ತುಂಬುವಂತಹ ಕೆಲಸವನ್ನು ಎನ್.ಡಿ.ಎ ಮಾಡುತ್ತೆ ಎಂದರು.

ಮೂರು ರಾಜ್ಯಗಳ ಉಸ್ತುವಾರಿ ಕುರಿತಂತೆ ಪಕ್ಷ ಕೊಡುವ ಜವಾಬ್ದಾರಿಗೆ ಜೀವ ತುಂಬುವ ಕೆಲಸ ಮಾಡುತ್ತೇನೆ. 500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ಸಂಭ್ರಮ ನೆಲೆಸಿದೆ. ಯೋಗಿ ಆದಿತ್ಯಾನಾಥ್ ನೇತೃತ್ವದ ಸರ್ಕಾರ ಒಳ್ಳೆ ಕೆಲಸ ಮಾಡುತ್ತಿದೆ. ಜಗತ್ತಿನ ಜನ ಸಂಭ್ರಮಿಸಿದ್ದಾರೆ. ಇದೊಂದು ಶುಭ ಸಂಕೇತ. ಆಯೋಧ್ಯೆಯಲ್ಲಿ ಮತ್ತೆ ವೈಭವ ಮರುಕಳಿಸಲಿದೆ ಎಂದರು.

ಇನ್ನೂ ಪ್ರತಿವರ್ಷದಂತೆ ಈ ವರ್ಷವೂ ಕೂಡ ಬರಿಗಾಲಲ್ಲಿ ದೇವಿರಮ್ಮ ದೇವಿ ಬೆಟ್ಟವೇರಿ, ದೇವಿ ದರ್ಶನ ಮಾಡೋದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಿಸ್ ಮಾಡಿಕೊಳ್ಳಲಿಲ್ಲ. ಪತ್ನಿ ಪಲ್ಲವಿ ಜೊತೆ ಬೆಟ್ಟವೇರಿ, ದೇವಿರಮ್ಮ ದೇವಿಗೆ ಪ್ರಾರ್ಥನೆ ಸಲ್ಲಿಸಿದರು.

Comments are closed.