ರಾಷ್ಟ್ರೀಯ

2024ರ ಚುನಾವಣೆಗೆ ಬಿಜೆಪಿ ಸಿದ್ಧತೆ: ದೇಶಾದ್ಯಂತ 100 ದಿನಗಳ ಪ್ರವಾಸ

Pinterest LinkedIn Tumblr


ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ ನಡೆಸುತ್ತಿದ್ದು, ರಾಷ್ಟ್ರೀಯ ನಾಯಕ ಜೆಪಿ ನಡ್ಡಾ, ದೇಶಾದ್ಯಂತ ಸಂಚರಿಸಿ ಪಕ್ಷ ಸಂಘಟಿಸಲು ನಿರ್ಧರಿಸಿದ್ದಾರೆ.

ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಗಳ ಗೆಲುವಿನ ನಂತರ ವಿಶ್ರಾಂತಿ ಪಡೆಯದ ಜೆಪಿ ನಡ್ಡಾ ದೇಶಾದ್ಯಂತ ಸಂಚರಿಸಲು 100 ದಿನಗಳ ರಾಷ್ಟ್ರೀಯ ವಿಸ್ತೃತ್ ಪ್ರವಾಸ್ ಹಮ್ಮಿಕೊಂಡಿದ್ದಾರೆ.

2024 ರ ಸಾರ್ವತ್ರಿಕ ಚುನಾವಣೆಗಳಿಗೆ ಕಾರ್ಯತಂತ್ರ ರೂಪಿಸುವ ಕೆಲಸಕ್ಕಾಗಿ ಅವರು ರಾಜ್ಯದಲ್ಲಿ ಉಳಿದುಕೊಳ್ಳಲು ಕೆಲವು ದಿನಗಳನ್ನು ವಿಂಗಡಿಸಿದ್ದಾರೆ.2019 ರಲ್ಲಿ ಪಕ್ಷವು ಗೆಲ್ಲದ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ಮತ್ತು 2024 ರಲ್ಲಿ ಆ ಸ್ಥಾನಗಳನ್ನು ಹೇಗೆ ಗೆಲ್ಲುವುದು ಎಂಬುದರ ಕುರಿತು ಚರ್ಚಿಸಲು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಿದ್ದಾರೆ.

ಬಿಹಾರ ವಿಧಾನಸಭೆ ಫಲಿತಾಂಶದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಜೆಪಿ ನಡ್ಡಾಅವರನ್ನು ಹೊಗಳಿದ್ದಾರೆ. ಪಕ್ಷದ ಜನ ಪ್ರತಿನಿಧಿಗಳನ್ನು ಭೇಟಿಯಾಗುವುದು, ಹೊಸ ಸಂಭಾವ್ಯ ಒಕ್ಕೂಟಗಳ ಬಗ್ಗೆ ಚರ್ಚಿಸುವುದು, ವಿವಿಧ ಪ್ರಭಾವಿ ಗುಂಪುಗಳೊಂದಿಗೆ ಸಂವಹನ ನಡೆಸುವುದು, ಕೇಡರ್‌ನಲ್ಲಿ ಪಕ್ಷದ ಸಿದ್ಧಾಂತದ ಬಗ್ಗೆ ಸ್ಪಷ್ಟತೆ ತರುವುದು ಮತ್ತು ಪಕ್ಷದ ಹಿರಿಯ ಕಾರ್ಯಕರ್ತರು ಮತ್ತು ರಾಜ್ಯಗಳಲ್ಲಿನ ಸಮ್ಮಿಶ್ರ ಪಾಲುದಾರರೊಂದಿಗೆ ಚರ್ಚಿಸಲು ನಡ್ಡಾ ನಿರ್ಧರಿಸಿದ್ದಾರೆ.

ತಂಡಗಳನ್ನು ರಚಿಸಿ ಗುರಿ ತಲುಪಲು, ಪಕ್ಷದ ಬಗ್ಗೆ ವಿವರವಾದ ವರದಿ ಹಾಗೂ ಪಕ್ಷ ಸಂಬಂಧಿತ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಇನ್ನೂ ಕೊರೋನಾ ಸಾಂಕ್ರಾಮಿಕ ರೋಗ ಇರುವುದರಿಂದ ತಮ್ಮ ಪ್ರವಾಸದ ಸಮಯದಲ್ಲಿ ದೊಡ್ಡ ಹಾಲ್ ನಲ್ಲಿ ಕಾರ್ಯಕ್ರಮ ಆಯೋಜಿಸಿ 200 ಮಂದಿಗಿಂತ ಹೆಚ್ಚು ಜನ ಭಾಗವಹಿಸಿದಂತೆ ಸೂಚಿಸಿದ್ದಾರೆ. ಇನ್ನೂ ಸಭೆ ಕಾರ್ಯಕ್ರಮ ನಡೆಸುವ ವೇಳೆ ತಾಪಮಾನ ಪರೀಕ್ಷೆ ಯಂತ್ರ, ಸ್ಯಾನಿಟೈಸರ್ ಫೇಸ್ ಮಾಸ್ಕ್ ಕಡ್ಡಾಯವಾಗಿ ಧರಿಸಲು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Comments are closed.