ಮನೋರಂಜನೆ

ನಾಗಚೈತನ್ಯ-ಸಾಯಿ ಪಲ್ಲವಿ ಮದುವೆ ಫೋಟೋ ವೈರಲ್‌!

Pinterest LinkedIn Tumblr


ಟಾಲಿವುಡ್‌ನ ನಟ ನಾಗಚೈತನ್ಯ ಈಗಾಗಲೇ ಸಮಂತಾ ಜೊತೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಈಗ ನಾಗಚೈತನ್ಯ ಮತ್ತು ಸಾಯಿ ಪಲ್ಲವಿಯ ಮದುವೆ ಫೋಟೋವೊಂದು ವೈರಲ್‌ ಆಗಿದೆ.

ಅರೆರೆ… ಸಮಂತಾ ಅಕ್ಕಿನೇನಿ ಅವರನ್ನು ಬಿಟ್ಟು ಸಾಯಿ ಪಲ್ಲವಿ ಜೊತೆ ನಾಗಚೈತನ್ಯ ಮದುವೆ ಆಗಿಬಿಟ್ರಾ ಎಂದು ಹುಬ್ಬೇರಿಸಬೇಡಿ. ಮದುವೆ ಫೋಟೋ ವೈರಲ್‌ ಆಗಿದೆ. ಆದರೆ ಅದು ರಿಯಲ್‌ ಮದುವೆ ಅಲ್ಲ. ಅವರಿಬ್ಬರು ಜೊತೆಯಾಗಿ ನಟಿಸುತ್ತಿರುವ ‘ಲವ್‌ ಸ್ಟೋರಿ’ ಸಿನಿಮಾದ ಹೊಸ ಪೋಸ್ಟರ್‌ ಇದು. ದೀಪಾವಳಿ ಹಬ್ಬದ ಪ್ರಯುಕ್ತ ಈ ಪೋಸ್ಟರ್‌ ಬಿಡುಗಡೆ ಆಗಿದ್ದು, ಅಭಿಮಾನಿಗಳು ಇಷ್ಟಪಟ್ಟಿದ್ದಾರೆ.

ಬಹುನಿರೀಕ್ಷಿತ ಟಾಲಿವುಡ್‌ ಸಿನಿಮಾಗಳಲ್ಲಿ ‘ಲವ್‌ ಸ್ಟೋರಿ’ ಕೂಡ ಒಂದು. ‘ಫಿದಾ’ ಖ್ಯಾತಿಯ ನಿರ್ದೇಶಕ ಶೇಖರ್‌ ಕಮ್ಮುಲ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದು, ಟೀಸರ್‌ ಮತ್ತು ಪೋಸ್ಟರ್‌ಗಳಿಂದ ಹೈಪ್‌ ಸೃಷ್ಟಿಸಿದ್ದಾರೆ. ತೆಲಂಗಾಣ ಹುಡುಗನಾಗಿ ನಾಗಚೈತನ್ಯ ಕಾಣಿಸಿಕೊಳ್ಳಲಿದ್ದು, ಅಲ್ಲಿನ ಲೋಕಲ್‌ ಶೈಲಿಯ ತೆಲುಗು ಮಾತನಾಡಲಿದ್ದಾರೆ. ಈಗ ರಿಲೀಸ್‌ ಆಗಿರುವ ಮದುವೆ ಪೋಸ್ಟರ್‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಲಾಕ್‌ಡೌನ್‌ಗೂ ಮುನ್ನ ಈ ಚಿತ್ರದ ಶೂಟಿಂಗ್‌ ಆರಂಭ ಆಗಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ದೀರ್ಘ ಬ್ರೇಕ್‌ ನೀಡಲಾಗಿತ್ತು. ಸೆಪ್ಟೆಂಬರ್‌ನಲ್ಲಿ ಮತ್ತೆ ಚಿತ್ರೀಕರಣ ಆರಂಭಿಸಿದ್ದ ‘ಲವ್‌ಸ್ಟೋರಿ’ ಬಳಗ ತೆಲಂಗಾಣದ ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ದೃಶ್ಯಗಳನ್ನು ಸೆರೆ ಹಿಡಿದಿದೆ. ಏಷ್ಯನ್‌ ಸಿನಿಮಾಸ್‌, ಒಮಿಗೋ ಕ್ರಿಯೇಷನ್ಸ್‌ ಮತ್ತು ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌ ಸಂಸ್ಥೆಗಳು ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. 2020 ಕ್ರಿಸ್‌ ಮಸ್‌ಗೆ ‘ಲವ್‌ ಸ್ಟೋರಿ’ ರಿಲೀಸ್‌ ಆಗುವ ಸಾಧ್ಯತೆ ಇದೆ.

Comments are closed.