ಕರ್ನಾಟಕ

ಉಮಾಶ್ರೀ ಮನೆಗೆ ಕನ್ನ ಹಾಕಿದ ಇಬ್ಬರು ಕಳ್ಳರು ಅಂದರ್!

Pinterest LinkedIn Tumblr

ಬಾಗಲಕೋಟೆ: ಮಾಜಿ ಸಚಿವೆ ಉಮಾಶ್ರೀ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ತೇರದಾಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಜಮಖಂಡಿಯ ಯಲ್ಲಪ್ಪ ಗಡ್ಡಿ ಹಾಗೂ ಹಾಗೂ ಮುಧೋಳದ ದುರ್ಗಪ್ಪ ವಾಲ್ಮೀಕಿ ಬಂಧಿತ ಆರೋಪಿಗಳು.

ನಗರದ ರಬಕವಿಯ ವಿದ್ಯಾನಗರದಲ್ಲಿರುವ ಉಮಾಶ್ರೀಯವರ ನಿವಾಸದಲ್ಲಿ ನವೆಂಬರ್ 2 ರಂದು ಕಳ್ಳತನವಾಗಿತ್ತು. ಮಾಜಿ ಸಚಿವೆ ಮನೆಯಲ್ಲಿದ್ದ 2 ಲಕ್ಷ ರೂಪಾಯಿ ನಗದು ಎಗರಿಸಿ ಪರಾರಿಯಾಗಿದ್ದರು. ಈ ಬಗ್ಗೆ ತೇರದಾಳ ಪೊಲೀಸ್ ಠಾಣೆಗೆ ಉಮಾಶ್ರೀ ದೂರು ಕೊಟ್ಟಿದ್ದರು.

ಬಂಧಿತ ಆರೋಪಿ ಯಲ್ಲಪ್ಪ ಗಡ್ಡಿ ಕುಖ್ಯಾತ ಕಳ್ಳನೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತರಿಂದ 1.94 ಲಕ್ಷ ರೂಪಾಯಿಯನ್ನು ತೇರದಾಳ ಪೊಲೀಸರು ವಶಪಡಿಸಿಕೊಂಡಿದ್ದಾರೆ.

Comments are closed.