ಕುಟುಂಬದವರು, ಆಪ್ತರು, ಗುರು ಹಿರಿಯರ ಸಮ್ಮುಖದಲ್ಲಿ ತಮ್ಮ ಬಾಳಸಂಗಾತಿ ಬೆರಳಿಗೆ ಉಂಗುರ ತೊಡಿಸಬೇಕು ಅನ್ನೋ ಆಸೆ ಎಲ್ಲರಿಗೂ ಇದ್ದೇ ಇರುತ್ತೆ.. ಆದ್ರೆ ಇಲ್ಲೊಂದು ಜೋಡಿ ತಮ್ಮ ಆಸೆಯನ್ನ ವಿಶೇಷವಾಗಿ ನೆರವೇರಿಸಿಕೊಂಡಿದ್ದಾರೆ.
ಅಮೆರಿಕದಲ್ಲಿ ಆದ ಎಂಗೇಜ್ಮೆಂಟ್ಗೆ ಬೆಂಗಳೂರಿನಲ್ಲಿ ಶಾಸ್ತ್ರ ಮಾಡಲಾಗಿದೆ. ಹೌದು, ಅಮೆರಿಕದಲ್ಲಿದ್ದ ನವಜೋಡಿ ಲೈವ್ನಲ್ಲಿ ಎಂಗೇಜ್ ಆಗಿದ್ದಾರೆ. ಇದೇ ವೇಳೆ ಬೆಂಗಳೂರಿನಲ್ಲಿದ್ದ ಕುಟುಂಬಸ್ಥರು ಖಾಸಗಿ ಹೋಟೆಲ್ನಲ್ಲಿ ಸರಳವಾಗಿ ಶಾಸ್ತ್ರಗಳನ್ನ ನೆರವೇರಿಸಿದೆ. ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ನವಜೋಡಿಯನ್ನ ಹರಸಿ ಹಾರೈಸಿದ್ದಾರೆ.