ಕರ್ನಾಟಕ

ಬೆರಳು ಮುದ್ರೆ ಹೋಲಿಕೆ ಪರೀಕ್ಷೆಯ ವರದಿ ನೀಡಲು ಡಿವೈಎಸ್‌ಪಿಯಿಂದ 1 ಲಕ್ಷ ರೂ. ಲಂಚದ ಬೇಡಿಕೆ: ಭ್ರಷ್ಟಾಚಾರ ನಿಗ್ರಹ ದಳದಿಂದ ಬಂಧನ

Pinterest LinkedIn Tumblr


ಬೆಂಗಳೂರು:50 ಸಾವಿರ ರೂ. ಲಂಚ ಪಡೆದ ಆರೋಪದ ಮೇರೆಗೆ ಬೆಂಗಳೂರಿನ ಮಡಿವಾಳದಲ್ಲಿರುವ ಬೆರಳು ಮುದ್ರೆ ಘಟಕದ ಪೊಲೀಸ್‌ ಉಪಾಧೀಕ್ಷಕ ಶರಣಪ್ಪ ಎಂಬುವರನ್ನು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಬೆರಳು ಮುದ್ರೆ ಹೋಲಿಕೆ ಪರೀಕ್ಷೆಯ ವರದಿ ನೀಡಲು 1 ಲಕ್ಷ ರೂ.ಗೆ ಬೇಡಿಕೆ ಇಟ್ಟು 50 ಸಾವಿರದ ಈ ಲಂಚದ ಬೇಡಿಕೆಯನ್ನು ಇಡಲಾಗಿತ್ತು ಎಂದು ವರದಿಯಾಗಿದೆ. ತುಮಕೂರಿನ ಪಿ.ಎಚ್‌. ಕಾಲೊನಿಯ ನಿವಾಸಿಯೊಬ್ಬರು ಬ್ಯಾಂಕ್‌ ಆಫ್‌ ಬರೋಡಾದಲ್ಲಿ ಕ್ಲರಿಕಲ್‌ ಹುದ್ದೆಗೆ ಪರೀಕ್ಷೆ ಬರೆದು ಆಯ್ಕೆಯಾಗಿದ್ದರು. ಆದರೆ, ಪರೀಕ್ಷೆ ದಿನದಂದು ನೀಡಿದ್ದ ಬೆರಳು ಮುದ್ರೆಗೂ ಅರ್ಜಿ ಸಲ್ಲಿಸಿದ ಸಮಯದಲ್ಲಿ ನೀಡಿದ ಬೆರಳು ಮುದ್ರೆಗೂ ಹೋಲಿಕೆಯಾಗುತ್ತಿಲ್ಲ. ಹೀಗಾಗಿ, ಬೆರಳು ಮುದ್ರೆಯನ್ನು ಫೋರೆನ್ಸಿಕ್‌ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ಬ್ಯಾಂಕ್‌ ಆಫ್‌ ಬರೋಡಾ ಪತ್ರದ ಮೂಲಕ ತಿಳಿಸಿತ್ತು.

ಈ ನಡುವೆ, ಶರಣಪ್ಪ, ಖಾಸಗಿ ವ್ಯಕ್ತಿ ಮಂಜುನಾಥ ಶೆಟ್ಟಿ ಎಂಬುವರ ಮೂಲಕ ದೂರುದಾರನನ್ನು ಸಂಪರ್ಕಿಸಿದ್ದರು. ನಿಮ್ಮ ಪರವಾಗಿ ವರದಿ ನೀಡಲು 1 ಲಕ್ಷ ರೂ. ಲಂಚ ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದರು. ಅಂತಿಮವಾಗಿ 60 ಸಾವಿರ ರೂ.ಗೆ ವರದಿ ನೀಡಲು ಒಪ್ಪಿದ್ದರು. ಲಂಚ ನೀಡಲು ಇಚ್ಛಿಸದ ದೂರುದಾರ, ತುಮಕೂರಿನ ಎಸಿಬಿ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಅಧಿಕಾರಿಗಳು, ಅ.21ರಂದು ಟ್ರ್ಯಾಪ್‌ ಕಾರ್ಯಾಚರಣೆ ನಡೆಸಿ ಡಿವೈಎಸ್ಪಿ ಶರಣಪ್ಪ ಹಾಗೂ ಅವರ ಪರವಾಗಿ ಮುಂಗಡವಾಗಿ 50 ಸಾವಿರ ರೂ. ಲಂಚ ಪಡೆದ ಖಾಸಗಿ ವ್ಯಕ್ತಿ ಮಂಜುನಾಥ ಶೆಟ್ಟಿಯನ್ನು ಬಂಧಿಸಿದ್ದಾರೆ.

Comments are closed.