ಕರ್ನಾಟಕ

ಸಂಕ್ರಾಂತಿಗೆ ರಿಲೀಸ್ ಆಗಲಿದೆಯೇ ಬಹುನಿರೀಕ್ಷಿತ ಕೆ.ಜಿ.ಎಫ್. ಚಾಪ್ಟರ್-2…?

Pinterest LinkedIn Tumblr

ಬೆಂಗಳೂರು: ದೇಶಾದ್ಯಂತ ಭರ್ಜರಿ ಸುದ್ದಿಯಾಗಿದ್ದ ಕೆ.ಜಿ.ಎಫ್. ಸಿನೆಮಾ ಒಂದು ಹೊಸ ಮೈಲಿಗಲ್ಲು ಸೃಷ್ಟಿಸಿತ್ತು. ಬಳಿಕ ಕೆ.ಜಿ.ಫ್ ಎರಡನೇ ಭಾಗ ಕೊರೋನಾ ಹಿನ್ನೆಲೆಯಲ್ಲಿ ಅರ್ಧಕ್ಕೆ ನಿಂತಿತ್ತು. ಕೆ.ಜಿ.ಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣ ವೇಗದಿಂದ ಸಾಗುತ್ತಿದ್ದು ಎಲ್ಲವೂ ಅಂದುಕೊಂಡಂತೆ ನಡೆದರೆ ಜನವರಿಯಲ್ಲಿ ಸಂಕ್ರಾಂತಿಗೆ ತೆರೆಕಾಣಲಿದೆ ಎಂಬ ಮಾಹಿತಿ ಗಾಂಧೀ ನಗರದಲ್ಲಿ ಹರಿದಾಡುತ್ತಿದೆ‌.

ಚಾಪ್ಟರ್ 2 ಗೆ ಎಕ್ಸೆಲ್ ಎಂಟರ್ಟೈನ್ಮೆಂಟ್’ನವರು ಕೂಡ ಸಾತ್ ನೀಡಿದ್ದಾರೆ. ಚಾಪ್ಟರ್ 2 ನಲ್ಲಿ ಅಧೀರನಾಗಿ ಸಂಜಯ್ ದತ್, ಪ್ರಮುಖ ಪಾತ್ರವೊಂದಕ್ಕೆ ರವೀನಾ ಟೆಂಡನ್ ಮೊದಲಾದವರು ಬಣ್ಣ‌ಹಚ್ಚಿದ್ದು ಕ್ಲೈಮ್ಯಾಕ್ಸ್ ಫೈಟಿಂಗ್ ಚಿತ್ರೀಕರಣಕ್ಕೆ ಸಂಜಯ್ ದತ್ ಬರಲಿದ್ದಾರೆ. ಬಹುತೇಕ ನವೆಂಬರ್ ತಿಂಗಳಿನಲ್ಲಿ‌ ಅವರ ಕಾಲ್ ಶೀಟ್ ಸಿಕ್ಕಿದೆ ಎನ್ನಲಾಗಿದೆ. ಚಿತ್ರದಲ್ಲಿ ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಮತ್ತು ಪ್ರಮುಖ ಪಾತ್ರವೊಂದರಲ್ಲಿ ಮಾಳವಿಕಾ ಅಭಿನಯ ಮಾಡುತ್ತಿದ್ದಾರೆ.

ಎಲ್ಲವೂ ಅಂದುಕೊಂಡಂತೆ ಇದ್ದಿದ್ದರೆ ಚಾಪ್ಟರ್ 2 ರಿಲೀಸ್ ಆಗಬೇಕಿತ್ತು. ಸದ್ಯ ಅಂತಿಮ ಭಾಗದ ಚಿತ್ರೀಕರಣ ಭರದಿಂದ ಸಾಗಿದೆ.

 

Comments are closed.