ಬೆಂಗಳೂರು : ನೆರೆ ಪ್ರವಾಹದಿಂದ ತತ್ತರಿಸಿ ಹೋಗಿರುವ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ಸ್ಯಾಂಡಲ್ವುಡ್ನ ಸ್ಟಾರ್ ನಟ ಕಿಚ್ಚ ಸುದೀಪ್ ಧಾವಿಸಿದ್ದಾರೆ. ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ನಿರಂತರವಾಗಿ ಸಾಮಾಜಿಕ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಸುದೀಪ್, ರಣಭೀಕರ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉತ್ತರ ಕರ್ನಾಟಕದ ಜನರಿಗೆ ನೆರವಿನ ಹಸ್ತಚಾಚಿದ್ದಾರೆ.
ಉತ್ತರ ಕರ್ನಾಟಕ ನೆರೆ, ಪ್ರವಾಹದಿಂದ ತತ್ತರಿಸಿ ಹೋಗಿದೆ. ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಸಮರೋಪಾದಿಯ ನೆರವಿನ ಕಾರ್ಯದಲ್ಲಿ ತೊಡಗಿದೆ. ಕಲಬುರಗಿ, ರಾಯಚೂರು, ಯಾದಗಿರಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಹಲವು ಜಿಲ್ಲೆಯ ಗ್ರಾಮಗಳು ಮಳೆಯಿಂದಾಗಿ ತೊಂದರೆ ಅನುಭವಿಸುತ್ತಿವೆ.
ಉತ್ತರ ಕರ್ನಾಟಕದಲ್ಲಿ ವರುಣನ ಆರ್ಭಟ ಜೋರಾಗಿದೆ. ಕಳೆದ ವರ್ಷವೇ ಉತ್ತರ ಕರ್ನಾಟಕ ದೊಡ್ಡ ಪ್ರಮಾಣದ ಪ್ರವಾಹಕ್ಕೆ ಸಿಲುಕಿ ತತ್ತರಿಸಿತ್ತು. ಆ ನೋವಿನಿಂದ ಹೊರಬಂದು ಸಾಮಾನ್ಯ ಸ್ಥಿತಿಗೆ ತಲುಪುವಷ್ಟರಲ್ಲೇ ಕರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ವಿಶ್ವವೇ ಸಿಲುಕಿತು. ಈಗ ಕರೊನಾ ಸೋಂಕಿನ ಭೀತಿಯಲ್ಲಿರುವಾಗಲೇ ಮತ್ತೆ ವರುಣನ ಆರ್ಭಟ ಜೋರಾಗಿದ್ದು, ಉತ್ತರ ಕರ್ನಾಟಕ ಪ್ರವಾಹದ ಸುಳಿಗೆ ಸಿಲುಕಿದೆ.
ಇದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗೆ ನಟ ಕಿಚ್ಚ ಸುದೀಪ್ ಧಾವಿಸಿದ್ದಾರೆ. ನೆರೆ ಸಂತ್ರಸ್ತರು, ಜಸ್ಟ್ ಅವರು ನೀಡಿರುವ ನಂಬರ್ ಗೆ ಕರೆ ಮಾಡಿದ್ರೇ ಸಾಕು, ನೆರವಿನ ಸಹಾಯ ಸಿಗಲಿದೆ.
ಈ ಕುರಿತಂತೆ ಟ್ವಿಟ್ಟರ್ ನಲ್ಲಿ ನಟ ಕಿಚ್ಚ ಸುದೀಪ್ ಮಾಹಿತಿ ಹಂಚಿಕೊಂಡಿದ್ದು, ತಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ನೆರೆ ಸಂತ್ರರ ನೆರವಿಗೆ ಧಾವಿದ್ದೇನೆ. ಉತ್ತರ ಕರ್ನಾಟಕ..’ಮಹಾ ಸೇವಕ’ ಕಿಚ್ಚ_ಸುದೀಪ ಸರ್ ಸದಾ ನಿಮ್ಮೊಂದಿಗೆ. ‘ಸಹಾಯವಾಣಿ ಸಂಖ್ಯೆ : 6360334455’ ಹೆಚ್ಚೆನು ಹೇಳೊಲ್ಲ.. ತಡಮಾಡದೆ ಆದಷ್ಟು ಹೆಚ್ಚು ಶೇರ್ ಮಾಡಿ. ಮೊದಲು ಮಾನವನಾಗು ಎಂದು ತಿಳಿಸಿದ್ದಾರೆ.

ಉತ್ತರ ಕರ್ನಾಟಕ..”ಮಹಾ ಸೇವಕ” #ಕಿಚ್ಚ_ಸುದೀಪ ಸರ್ ಸದಾ ನಿಮ್ಮೊಂದಿಗೆ. “ಸಹಾಯವಾಣಿ ಸಂಖ್ಯೆ : 6360334455” ಹೆಚ್ಚೆನು ಹೇಳೊಲ್ಲ.. ತಡಮಾಡದೆ ಆದಷ್ಟು ಹೆಚ್ಚು ಶೇರ್ ಮಾಡಿ. #ಮೊದಲು_ಮಾನವನಾಗು #KichchaSudeepaCharitableSociety
ಅಗತ್ಯವಾಗಿ ಬೇಕಿರುವ ಸಾಮಾಗ್ರಿ ಎಲ್ಲಿಗೆ ಅತ್ಯಂತ ಅವಶ್ಯಕವಾಗಿದೆ ಎಂಬುದರ ಮಾಹಿತಿ ನೀಡಿ. ಕಷ್ಟದಲ್ಲಿರುವ ನಿಮ್ಮೊಂದಿಗೆ ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿ ಸದಾ ಜೊತೆಯಲ್ಲಿರುತ್ತದೆ. ಆದಷ್ಟು ಬೇಗ ನಿಮ್ಮನ್ನು ನಾವು ಸೇರಲಿದ್ದೇವೆ’ ಎಂದು ಅಭಯ ನೀಡಿರುವ ಟ್ರಸ್ಟ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ.