ಕರ್ನಾಟಕ

ಹೊಟೇಲ್ ಬಿರಿಯಾನಿಗಾಗಿ 1.5 ಕಿ.ಮೀ ಉದ್ದ ಕ್ಯೂ ನಿಂತ ಜನತೆ!

Pinterest LinkedIn Tumblr


ಹೊಸಕೋಟೆ: ಹೊಟೇಲ್ ಬಿರಿಯಾನಿಗಾಗಿ ಜನರು ಸುಮಾರು 1.5 ಕಿ.ಮೀ. ಉದ್ದ ಸಾಲು ನಿಂತ ಘಟನೆ ಇಲ್ಲಿಂದ ವರದಿಯಾಗಿದೆ.

ನಿಮ್ಮ ಊಹೆ ತಪ್ಪು, ಇಲ್ಲಿ ಮೈಲುಗಟ್ಟಲೆ ಉದ್ದಕ್ಕೆ ಜನರು ಸಾಲಿನಲ್ಲಿ ನಿಂತುಕೊಂಡಿರುವುದು ತಮ್ಮ ಮೆಚ್ಚಿನ ಬಿರಿಯಾನಿಗಾಗಿ. ಈ ಕೊರೋನಾ ಇರುವ ಸಮಯದಲ್ಲಿಯೂ ಜನ ಹೀಗೆ ನಿಂತುಕೊಂಡಿದ್ದಾರಲ್ಲ, ಇವರಿಗೆ ಏನನ್ನಬೇಕು ಎಂದು ನೀವು ಭಾವಿಸಬಹುದು.

ಆದರೆ ಜನರು ಈ ಬಿರಿಯಾನಿಗೆ ಮರುಳಾಗಿರುವುದು ಅದರ ರುಚಿಗಾಗಿ. ಹೊಸಕೋಟೆಯಲ್ಲಿರುವ ಆನಂದ್ ದಮ್ ಬಿರಿಯಾನಿಯನ್ನು ಒಮ್ಮೆ ತಿಂದವರು ಅದರ ರುಚಿಗೆ ಸೋಲದವರಿಲ್ಲ. ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ಬಾಯಲ್ಲಿ ಸ್ವಾದ ಹುಟ್ಟಿಸುವ ರುಚಿಗೆ ಬೆಳ್ಳಂಬೆಳಗ್ಗೆ ಬಂದು ಜನರು ನಿಂತು ಬಿರಿಯಾನಿ ಕಟ್ಟಿಸಿಕೊಂಡು ಹೋಗುತ್ತಾರೆ, ಇಲ್ಲವೇ ಅಲ್ಲೇ ನಿಂತು ಬಿಸಿ ಬಿಸಿ ಬಿರಿಯಾನಿ ಸೇವಿಸಿ ಹೋಗುತ್ತಾರೆ.

ಹೀಗೆ ಸಾಲಿನಲ್ಲಿ ನಿಂತ ಒಬ್ಬ ಗ್ರಾಹಕ ಹೇಳುವುದು ಹೀಗೆ: ನಾನು ಬೆಳಗ್ಗೆ 4 ಗಂಟೆಗೆ ಬಂದು ಸಾಲಿನಲ್ಲಿ ನಿಂತಿದ್ದೇನೆ. ನನಗೆ ಬಿರಿಯಾನಿ ಸಿಕ್ಕಿದ್ದು ಬೆಳಗ್ಗೆ 6.30ರ ಹೊತ್ತಿಗೆ. ಒಂದೂವರೆ ಕಿಲೋ ಮೀಟರ್ ಉದ್ದದ ಕ್ಯೂ ಇತ್ತು. ಬಿರಿಯಾನಿ ತುಂಬಾ ರುಚಿಯಾಗಿದೆ. ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ಬಿರಿಯಾನಿ ಖರೀದಿಸುವುದು ಅದನ್ನು ತಿಂದಾಗ ಸಾರ್ಥಕ ಎನಿಸುತ್ತದೆ ಎನ್ನುತ್ತಾರೆ.

ಆನಂದ್ ದಮ್ ಬಿರಿಯಾನಿ ಹೊಟೇಲ್ ಮಾಲಿಕ, 22 ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ. ಬಿರಿಯಾನಿಗೆ ಯಾವುದೇ ರಾಸಾಯನಿಕ ವಸ್ತುಗಳನ್ನು ಸೇರ್ಪಡೆ ಮಾಡುವುದಿಲ್ಲ. ನೈಸರ್ಗಿಕವಾಗಿ ಶುಚಿ-ರುಚಿಯಾಗಿ ತಯಾರಿಸುತ್ತೇವೆ. ದಿನಕ್ಕೆ ಸಾವಿರಕ್ಕೂ ಹೆಚ್ಚು ಕೆಜಿ ಬಿರಿಯಾನಿ ಮಾರಾಟವಾಗುತ್ತದೆ ಎಂದರು.

Comments are closed.