ಕರ್ನಾಟಕ

ಉತ್ತಮ ಆರೋಗ್ಯಕ್ಕಾಗಿ ಜಂಕ್ ಫುಡ್ ಬಿಟ್ಟು ಸಿರಿಧಾನ್ಯಗಳ ಮೊರೆ ಹೋದ ಜನತೆ

Pinterest LinkedIn Tumblr


ಬೆಂಗಳೂರು: ಕೊರೋನಾ ವೈರಸ್ ನಿಂದಾಗಿ ಜನತೆ ಜಂಕ್ ಫುಡ್ ನಿಲ್ಲಿಸಿ ರಾಗಿಯ ಮೊರೆ ಹೋಗಿದ್ದಾರೆ. ತಮ್ಮ ಜೀವನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತಮ್ಮ ಆಹಾರದಲ್ಲಿ ಸಿರಿಧಾನ್ಯ ಬಳಸಲು ಮುಂದಾಗಿದ್ದಾರೆ.

ಸಿರಿಧಾನ್ಯ ಗ್ಲುಟಿನ್ ಮುಕ್ತವಾಗಿದ್ದು,ಅಧಿಕ ಪ್ರೋಟಿನ್ ಹೊಂದಿರುತ್ತದೆ ಫೈಬರ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಅಧಿಕ ಪ್ರಮಾಣದಲ್ಲಿರುತ್ತದೆ. ಹಾಗಾಗಿ ಬಳಕೆ ಪ್ರಮಾಣ ಹೆಚ್ಚಿರುವುದರಿಂದ ರೈತರು ಕೂಡ ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯ ಬಿತ್ತನೆ ಮಾಡಿದ್ದಾರೆ,

ಈ ಮುಂಗಾರಿನ ಅವಧಿಯಲ್ಲಿ ಸುಮಾರು 1.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ಬಿತ್ತನೆ ಮಾಡಲಾಗಿದ್ದು, ಸೆಪ್ಟಂಬರ್ ತಿಂಗಳಿನಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಜನ ತಮ್ಮ ಆರೋಗ್ಯ ವೃದ್ಧಿಸಲು ಹೆಚ್ಚಿನ ಪ್ರಮಾಣದಲ್ಲಿ ಸಿರಿಧಾನ್ಯ ಬಳಕೆ ಮಾಡುತ್ತಿದ್ದಾರೆ.

ಸಿರಿಧಾನ್ಯಗಳ ಬೇಡಿಕೆ ಹೆಚ್ಚಿರುವ ಕಾರಣ ರೈತರು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲು ಉತ್ಸಾಹ ತೋರುತ್ತಿದ್ದಾರೆ. ದೇಶದಲ್ಲಿ ಕರ್ನಾಟಕ ಸಿರಿಧಾನ್ಯ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿರಲಿದೆ. ಪ್ರತಿ ಹೆಕ್ಟೇರ್ ಸಿರಿಧಾನ್ಯ ಸರ್ಕಾರ 10 ಸಾವಿರ ರು. ಸಬ್ಸಿಡಿ ನೀಡುತ್ತಿದೆ ಎಂದು ಎಪಿಎಂಸಿ ಅಧ್ಯಕ್ಷ ರಮೇಶ್ ಚಂದ್ರ ಲಾಹೋಟಿ ತಿಳಿಸಿದ್ದಾರೆ.

ಈ ಮೊದಲು ಯಶವಂತಪುರ ಎಪಿಎಂಸಿಯಲ್ಲಿ ಕೇವಲ ಸಿರಿಧಾನ್ಯ ಮಾರಾಟ ಮಾಡಲು ಇಬ್ಬರು ಡೀಲರ್ ಮಾತ್ರ ಇದ್ದರು. ಕಳೆದ ಕೆಲವು ತಿಂಗಳುಗಳಲ್ಲಿ 12 ಮಂದಿ ಆಗಿದ್ದಾರೆ.

ಹೆಚ್ಚೆಚ್ಚು ಜನರು ಸಿರಿಧಾನ್ಯ ಮೊರೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆಯೂ ಹೆಚ್ಚಿದೆ, ಗುಣಮಟ್ಟದ ಜೊತೆಗೆ ಅಧಿಕ ಪ್ರಮಾಣದ ಸಿರಿಧಾನ್ಯ ಬೇಕಾಗುತ್ತದೆ ಎಂದು ವಿಜಯನಗರದ ಸಿರಿಧಾನ್ಯ ವ್ಯಾಪಾರಸ್ಥರೊಬ್ಬರು ತಿಳಿಸಿದ್ದಾರೆ.

ಈ ಮೊದಲು ಜನ ಸಿರಿಧಾನ್ಯ ಯಾವಾಗಲೋ ಒಮ್ಮೆ ಖರೀದಿಸುತ್ತಿದ್ದರು ಆದರೆ ಈಗ ನಿಯಮಿತವಾಗಿ ಖರೀದಿಸುತ್ತಿದ್ದಾರೆ, ಅದರಲ್ಲೂ ಹೆಚ್ಚಾಗಿ ಸಾವಯವ ಪದಾರ್ಥಗಳ ಖರೀದಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ.

ರಾಗಿ ಬೆಳೆಯಲು ಕಡಿಮೆ ಪ್ರಮಾಣದ ನೀರಿನ ಅವಶ್ಯಕತೆಯಿರುತ್ತದೆ, ತೇವಾಂಶ ಕಡಿಮೆಯಿದ್ದರೂ ಸಿರಿಧಾನ್ಯ ಉತ್ತಮವಾಗಿ ಬೆಳೆಯುತ್ತದೆ, ಸಿರಿಧಾನ್ಯ ಮನುಷ್ಯರ ಜೊತೆಗೆ ಹಸುಗಳಿಗೂ ಉತ್ತಮವಾಗಿದೆ ಎಂದು ಕೃಷಿ ವಿಶ್ವ ವಿದ್ಯಾನಿಲಯದ ನಿವೃತ್ತ ರಿಜಿಸ್ಟ್ರಾರ್ ಪ್ರೊ.ರಾಜೇಗೌಡ ಹೇಳಿದ್ದಾರೆ.

Comments are closed.