ಕರ್ನಾಟಕ

ಬೆಂಗಳೂರು ಜಾಲಹಳ್ಳಿ ಬಳಿ ಇಬ್ಬರು ಸುಪಾರಿ‌ ಕಿಲ್ಲರ್ಸ್ ಮೇಲೆ ಪೊಲೀಸ್ ಫೈರಿಂಗ್

Pinterest LinkedIn Tumblr

ಬೆಂಗಳೂರು: ಲಾಕ್‍ಡೌನ್ ನಡುವೆಯೂ ಪೊಲೀಸರು ಸುಪಾರಿ ಕಿಲ್ಲರ್ಸ್‌ಗಳ ಕಾಲಿಗೆ ಗುಂಡು ಹೊಡೆದಿರುವ ಘಟನೆ ನಗರದ ಜಾಲಹಳ್ಳಿ ಬಳಿ ನಡೆದಿದೆ.

ಭರತ್‌, ಅರುಣ್‌ ಗುಂಡೇಟು ತಿಂದು ಬಂಧನಕ್ಕೊಳಗಾದ ಸುಪಾರಿ ಕಿಲ್ಲರ್ಸ್‌ಗಳು.

ಜಮೀನು ವಿಚಾರಕ್ಕೆ ಅರುಣ್ ಮತ್ತು ಭರತ್ ಕಳೆದ ಕೆಲ ದಿನಗಳ ಹಿಂದೆ ರಾಜಶೇಖರ್ ಎಂಬವರು ಹತ್ಯೆ ಮಾಡಲು10 ಲಕ್ಷ ರೂ. ಸುಪಾರಿ ಪಡೆದಿದ್ದರು. ನಂತರ ಇದೇ ತಿಂಗಳ 23 ರಂದು ಹೆಸರಘಟ್ಟ ಬಳಿ ಯುವಕರ ಗುಂಪೊಂದು ಕಟ್ಟಿಕೊಂಡು ರಾಜಶೇಖರ್‌ ಅವರ ಕೊಲೆಗೆ ಯತ್ನಿಸಿದ್ದರು.

ಆರೋಪಿಗಳ ಬಂಧನಕ್ಕೆ ಸೋಲದೇವನಹಳ್ಳಿ ಪೋಲೀಸರು ತೆರಳಿದ್ದ ವೇಳೆ ಪೋಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಆಗ ಮೊದಲು ಪೋಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಎಚ್ಚರಿಸಿದ್ದಾರೆ. ಆದರೆ ಆರೋಪಿಗಳು ಶರಣಾಗಲು ಒಪ್ಪದಿದ್ದಾಗ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಘಟನೆಯಲ್ಲಿ ಇಬ್ಬರು ಹೆಡ್​​ಕಾನ್ಸ್​​ಟೇಬಲ್ ಗಳಿಗೆ ಗಾಯವಾಗಿದೆ.

Comments are closed.