ಕುಂದಾಪುರ: ತಾಲೂಕಿನ ತೆಕ್ಕಟ್ಟೆ ಸಮೀಪದ ಕೊರ್ಗಿ ಚಾರುಕೊಟ್ಟಿಗೆ ಎಂಬಲ್ಲಿ ಮೇಯಲು ಬಿಟ್ಟ ಜಾನುವಾರೊಂದು ಚಿರತೆ ದಾಳಿಗೆ ಬಲಿಯಾಗಿದೆ.
ಇಲ್ಲಿನ ನಿವಾಸಿ ಗಿರಿಜಾ ಪೂಜಾರಿ ಎನ್ನುವರ ಮನೆಯ ಜಾನುವಾರನ್ನು ಮೇಯಲು ಬಿಟ್ಟಿದ್ದು ಶನಿವಾರ ಸಂಜೆಯಾದರೂ ಕೂಡ ಹಸು ವಾಪಾಸ್ ಬಾರದಿದ್ದಾಗ ಮನೆಯವರು ಹಸುವನ್ನು ಹುಡುಕಾಡಿದ್ದು ಮನೆ ಸಮೀಪದ ಹಾಡಿಯಲ್ಲಿ ಹಸು ಶವ ಪತ್ತೆಯಾಗಿದೆ. ಜಾನುವಾರಿನ ಹಿಂಭಾಗದಲ್ಲಿ ಗಾಯವಾಗಿದ್ದು ಚಿರತೆ ದಾಳಿಯಿಂದ ಹಸು ಸಾವನ್ನಪ್ಪಿರುವುದು ಸ್ಪಷ್ಟವಾಗಿದೆ.
ಇನ್ನು ವಕ್ವಾಡಿ, ಕೆದೂರು, ಕೊರ್ಗಿ, ಚಾರುಕೊಟ್ಟಿಗೆ, ಹೆಸ್ಕತ್ತೂರು, ಬಿದ್ಕಲಕಟ್ಟೆ ಭಾಗದಲ್ಲಿ ನಿರಂತರವಾಗಿ ಚಿರತೆ ಕಾಟ ಹೆಚ್ಚಿದ್ದು ಜನರು ಹೆದರಿದ್ದಾರೆ. ಮೇಯಲು ಬಿಟ್ಟ ದನಗಳು, ಮನೆಯ ನಾಯಿಗಳು ಚಿರತೆ ದಾಳಿಗೆ ಬಲಿಯಾಗುತ್ತಿದೆ. ಚಿರತೆ ಓಡಾಟ ಇರುವಲ್ಲಿ ಅರಣ್ಯ ಇಲಾಖೆ ಬೋನು ಇರಿಸಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.