ಕರಾವಳಿ

ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಸರಳ ರೀತಿಯಲ್ಲಿ ನಡೆದ ನಾಗರಪಂಚಮಿ

Pinterest LinkedIn Tumblr

ಮಂಗಳೂರು, ಜುಲೈ.26 : ನಾಡಿನಾದ್ಯಂತ ಶನಿವಾರ ನಾಗರ ಪಂಚಮಿ ಸಂಭ್ರಮ. ಆದರೆ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಯಾವೂದೇ ನಾಗರಾಧಾನ ಕ್ಷೇತ್ರಗಳಲ್ಲಿ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಿಸದಂತೆ ಸರ್ಕಾರದಿಂದ ಆದೇಶವಾಗಿರುವುದರಿಂದ ಕೆಲವೊಂದು ಕ್ಷೇತ್ರಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ ಸರಳವಾಗಿ ನಾಗರ ಪಂಚಮಿ ಆಚರಣೆ ಮಾಡಲಾಯಿತು.

ಮಂಗಳೂರಿನ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ನಾಗಬನದಲ್ಲಿ ನಾಗರ ಪಂಚಮಿ ಪ್ರಯುಕ್ತ
ಶನಿವಾರ ಶ್ರೀ ನಾಗ ದೇವರಿಗೆ ಸರಳ ರೀತಿಯಲ್ಲಿ ಪಂಚಾಮೃತ ಅಭಿಷೇಕ, ನಾಗ ತಂಬಿಲ ಸೇವೆ, ಮಹಾಪೂಜೆ ಕ್ಷೇತ್ರದ ವಿಘ್ನೇಶ್ ಪುರೋಹಿತ್ ಇವರ ಪ್ರಧಾನ ಆಚಾರ್ಯತ್ವದಲ್ಲಿ ನೆರವೇರಿತು .

ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೆ ಕೇಶವ ಆಚಾರ್ಯ, ಎರಡನೇ ಮೊಕ್ತೇಸರ ಎಂ ಸುಂದರ ಆಚಾರ್ಯ ಬೆಳುವಾಯಿ, ಮೂರನೇ ಮೊಕ್ತೇಸರ ಎ. ಲೋಕೇಶ್ ಆಚಾರ್ಯ ಬಿಜೈ ಉಪಸ್ಥಿತರಿದ್ದರು.

Comments are closed.