ಕರ್ನಾಟಕ

ಬೆಂಗಳೂರಿನ 49 ಪೊಲೀಸ್ ಸಿಬ್ಬಂದಿಗೆ ಕೊರೋನಾ!

Pinterest LinkedIn Tumblr


ಬೆಂಗಳೂರು (ಜೂ. 26): ಬೆಂಗಳೂರಿನಲ್ಲಿ ಕೊರೋನಾ ಅಟ್ಟಹಾಸ ಹೆಚ್ಚಾಗುತ್ತಿದೆ. ಕೊರೋನಾದಿಂದಾಗಿ ಬೆಂಗಳೂರಿನ ನಾಲ್ಕು ಠಾಣೆಯ ಪೊಲೀಸರಿಗೆ ಟೆನ್ಷನ್ ಶುರುವಾಗಿದೆ. ದಿನ ಬೆಳಗಾದರೆ ಸಾಕು ಏನಾಗುತ್ತೋ ಎಂಬ ಆತಂಕ ಎದುರಾಗಿದೆ. ದಿನದಿಂದ ದಿನಕ್ಕೆ ಈ 4 ಪೊಲೀಸ್ ಠಾಣೆಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ.

ಕಲಾಸಿಪಾಳ್ಯ, ಸಿಟಿ ಮಾರುಕಟ್ಟೆ, ವಿವಿ ಪುರಂ ಟ್ರಾಫಿಕ್ ಹಾಗೂ ಕೆ.ಆರ್. ಮಾರುಕಟ್ಟೆ ಟ್ರಾಫಿಕ್ ಸ್ಟೇಷನ್​ಗಳಲ್ಲಿ ಇದುವರೆಗೂ 49 ಪೊಲೀಸರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಯಾವ ಠಾಣೆಯಲ್ಲಿ ಎಷ್ಟು ಸಿಬ್ಬಂದಿ ಇದ್ದಾರೆ, ಎಷ್ಟು ಜನಕ್ಕೆ ಪಾಸಿಟಿವ್ ಬಂದಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ…

ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ 78 ಜನ ಸಿಬ್ಬಂದಿ ಇದ್ದಾರೆ. ಅವರಲ್ಲಿ 24 ಪೊಲೀಸರಿಗೆ ಕೊರೋನಾ ಬಂದಿದೆ. ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ 80 ಜನ ಸಿಬ್ಬಂದಿ ಇದ್ದಾರೆ, ಅವರಲ್ಲಿ 10 ಜನರಿಗೆ ಪಾಸಿಟಿವ್ ಬಂದಿದೆ. ಕೆ.ಆರ್. ಮಾರುಕಟ್ಟೆ ಸಂಚಾರಿ ಠಾಣೆಯಲ್ಲಿ 77 ಪೊಲೀಸರಲ್ಲಿ 6 ಪೊಲೀಸರಿಗೆ ಕೊರೋನಾ ಸೋಂಕು ಬಂದಿದೆ. ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ 93 ಸಿಬ್ಬಂದಿ ಇದ್ದಾರೆ. ಅವರಲ್ಲಿ 9 ಪೊಲೀಸರಿಗೆ ಕೊರೋನಾ ಸೋಂಕು ತಗುಲಿದೆ. ಇನ್ನು, ವಿವಿ ಪುರಂ ಸಂಚಾರಿ ಪೊಲೀಸ್ ಠಾಣೆಯಲ್ಲಿ ಓರ್ವ ಪೇದೆ ಸಾವನ್ನಪ್ಪಿದ್ದಾರೆ.

ಉಳಿದಂತೆ, ಎಸಿಬಿ ಕಚೇರಿಯ ಅಧಿಕಾರಿಯೊಬ್ಬರ ಗನ್​ ಮ್ಯಾನ್​ಗೆ ಕೊರೋನಾ ಬಂದಿದೆ. ಕೊರೋನಾ ಸೋಂಕು ಕಂಡುಬಂದಿದ್ದರಿಂದ ಎಸಿಬಿ ಕಚೇರಿಯನ್ನು ಬಿಬಿಎಂಪಿ ಸೀಲ್​ಡೌನ್ ಮಾಡಿದೆ. ಕೆಂಗೇರಿ ಸಂಚಾರಿ ಠಾಣೆಯ ಮಹಿಳಾ ಕಾನ್ಸ್​ಟೇಬಲ್​ಗೂ ಕೊರೋನಾ ಸೋಂಕು ತಗುಲಿದೆ. ಬೆಂಗಳೂರಿನಲ್ಲಿ ಇಂದು ಒಟ್ಟು 6 ಪೊಲೀಸರಿಗೆ ಕೊರೋನಾ ಪಾಸಿಟಿವ್ ಬಂದಿದೆ.

Comments are closed.