ಬೆಂಗಳೂರು(ಜೂ. 24): ರಾಜ್ಯದಲ್ಲಿ ಕೊರೋನಾ ಸೋಂಕಿಗೆ ತುತ್ತಾಗುತ್ತಿರುವ ಪೊಲೀಸರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇದುವರೆಗೆ ರಾಜ್ಯದಲ್ಲಿ 170 ಪೊಲೀಸರಿಗೆ ಕೊರೋನಾ ಸೋಂಕು ಪತ್ತೆಯಾಗಿದ್ದು, ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದಲ್ಲಿ ಕೊರೋನಾ ಸೋಂಕಿಗೆ ಒಳಗಾಗಿರುವ ಪೊಲೀಸರ ಬಗ್ಗೆ ಡಿಜಿಪಿ ಕಚೇರಿಯಿಂದ ಅಧಿಕೃತ ಅಂಕಿ ಸಂಖ್ಯೆ ಹೊರ ಬಿದ್ದಿದೆ. ಮಾಹಾಮಾರಿ ಕೊರೋನಾಗೆ ತುತ್ತಾದ ಪೊಲೀಸರಲ್ಲಿ ಬೆಂಗಳೂರು ನಗರ ಮುಂಚೂಣಿಯಲ್ಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಅತ್ಯಧಿಕ ಪೊಲೀಸರು ಸೋಂಕಿಗೆ ಒಳಗಾಗಿದ್ದು 77 ಜನ ಪೊಲೀಸರಲ್ಲಿ ಪಾಸಿಟಿವ್ ದೃಢಪಟ್ಟಿದೆ. ಬೆಂಗಳೂರು ನಗರದಲ್ಲಿ 77 ಪಾಸಿಟಿವ್ ಕೇಸ್ ಗಳು ವರದಿಯಾಗಿದ್ದು, ಅದರಲ್ಲಿ 7 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ರೆ. ಮೂರು ಸಾವು ಮತ್ತು 67 ಸಕ್ರಿಯ ಪ್ರಕರಣಗಳು ಇವೆ.
ಇನ್ನೂ ಮೈಸೂರು ಸೇರಿ ರಾಜ್ಯಾದ್ಯಂತ 93 ಪಾಸಿಟಿವ್ ಕೇಸ್ ಗಳು ವರದಿಯಾಗಿವೆ. 93 ಪಾಸಿಟಿವ್ ಪ್ರಕರಣಗಳಲ್ಲಿ34 ಆಕ್ಟಿವ್ ಕೇಸ್ ಗಳಾಗಿದ್ದು, 59 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನೂ ಆಕ್ಟಿವ್ ಆಗಿರುವ ಕೇಸ್ ಗಳು ಬೆಂಗಳೂರು ಸೇರಿ ಜಿಲ್ಲಾ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೋಂಕಿತ ಪೊಲೀಸರಲ್ಲಿ ಕೆಎಸ್ಆರ್ ಪಿ ಮತ್ತು ಕಾನೂನು ಸುವ್ಯವಸ್ಥೆ ಪೊಲೀಸರೆ ಅಧಿಕವಾಗಿದ್ದು, ಉಳಿದಂತೆ ಟ್ರಾಫಿಕ್ ಹಾಗೂ ಸಿಸಿಬಿ ಕಚೇರಿ ಸೇರಿ ಬೇರೆ ಕಡೆ ಕೆಲಸ ಮಾಡಿದ ಕೆಲವು ಮಂದಿಗೆ ಮಾಹಾಮಾರಿ ವಕ್ಕರಿಸಿದೆ.
ಲಾಕ್ ಡೌನ್ ಜಾರಿಯಾದಗಿನಿಂದ ಪೊಲೀಸರು ಫ್ರಂಟ್ ಲೈನ್ ವಾರಿಯರ್ ಗಳಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದರು. ಆದರೆ ಈಗ ಖಾಕಿ ಪಡೆಯಲ್ಲಿ ಸೋಂಕು ಹೆಚ್ಚಾಗುತ್ತಿದ್ದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ.
Comments are closed.