ಕರ್ನಾಟಕ

ಐಎಎಸ್​ ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು: ಐಎಂಎ ಜ್ಯುವೆಲರಿ ಪ್ರಕರಣದಲ್ಲಿ ಲಂಚ ಪಡೆದ ಆರೋಪ ಎದುರಿಸುತ್ತಿದ್ದ ಐಎಎಸ್​ ಅಧಿಕಾರಿ ವಿಜಯಶಂಕರ್ ಅವರು ಇಂದು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಸ್ತುತ ಸಕಾಲ ಮಿಷನ್ ನಿರ್ದೇಶಕರಾಗಿದ್ದ ವಿಜಯಶಂಕರ್ ಅವರು ಜಯನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಹಿಂದೆ ಅವರು ಬೆಂಗಳೂರು ಜಿಲ್ಲಾಧಿಕಾರಿಯಾಗಿ ಕೆಲಸ ನಿರ್ವಹಿಸಿದ್ದರು.

ವಿಜಯಶಂಕರ್ ಅವರು ಐಎಂಎ ಜ್ಯುವೆಲ್ಲರ್ ಪ್ರಕರಣದಲ್ಲಿ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಐಎಂಎಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್​ ನೀಡಲು ಐಎಂಎ ಕಂಪನಿ ಮಾಲೀಕ ಮನ್ಸೂರ್ ಖಾನ್​ನಿಂದ ವಿಲೇಜ್ ಅಕೌಂಟೆಂಟ್ ಮಂಜುನಾಥ್ ಮೂಲಕ 1.5 ಕೋಟಿ ಹಣ ಪಡೆದಿದ್ದರು ಎಂಬ ಆರೋಪ ಎದುರಿಸುತ್ತಿದ್ದರು. ಹಣ ಪಡೆದ ಆರೋಪದಲ್ಲಿ ವಿಜಯಶಂಕರ್ ಅವರು ಎಸ್​ಐಟಿಯಿಂದ ಬಂಧನಕ್ಕೂ ಒಳಗಾಗಿದ್ದರು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಐಎಂಎ ಪ್ರಕರಣ ಎಸ್​ಐಟಿಯಿಂದ ಸಿಬಿಐಗೆ ವರ್ಗಾವಣೆ ಆದಾಗಲೂ ವಿಜಯಶಂಕರ್ ಅವರು ಸಿಬಿಐ ತನಿಖೆ ಎದುರಿಸಿದ್ದರು.

ಕುಟುಂಬ ಸದಸ್ಯರೆಲ್ಲ ತಂದೆಯ ಮನೆಗೆ ಹೋಗಿದ್ದರು. ಸಂಜೆ ವೇಳೆ ವಿಜಯಶಂಕರ್ ಮನೆಯಲ್ಲಿ ಒಬ್ಬರೆ ಇದ್ದರು. ಸಂಜೆ ಏಳು ಗಂಟೆ ಸುಮಾರಿಗೆ ಮನೆಯವರು ವಾಪಸ್ ಬಂದು, ಬಾಗಿಲು ತಟ್ಟಿದ್ದಾರೆ. ಆಗ ಎಷ್ಟೇ ಬಾಗಿಲು ಬಡಿದರು ತೆರೆಯದಿದ್ದಾಗ ಪಕ್ಕದ ಮನೆಯವರ ಸಹಾಯದಿಂದ ಡೋರ್ ಓಪನ್ ಮಾಡಿದ್ದಾರೆ. ಈ ವೇಳೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ, ತಿಲಕ್​ ನಗರ ಪೊಲೀಸರು ಹಾಗೂ ಮೈಕೋ ಲೇಔಟ್ ಎಸಿಪಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Comments are closed.