ಕರ್ನಾಟಕ

ರಾಯಚೂರಿನಲ್ಲಿ 8 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊರೋನಾ ಸೋಂಕು

Pinterest LinkedIn Tumblr


ರಾಯಚೂರು(ಜೂ.13): ಕೊರೋನಾ ನಿಯಂತ್ರಿಸಲು ಹಗಲು ರಾತ್ರಿಯೆನ್ನದೇ ಹೋರಾಟ ಮಾಡುತ್ತಿರುವ ವಾರಿಯರ್ಸ್​ಗೆ ಸೋಂಕು ತಗುಲಿದೆ. ರಿಮ್ಸ್​ನ 8 ಮಂದಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು ಕಾಣಿಸಿಕೊಂಡಿರುವುದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಹೀಗಾಗಿ ಇವರಿಗೆ ಹೀಗೆ ಸೋಂಕು ಬಂತು? ಎಂದು ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಸಚಿವರು ಸೂಚಿಸಿದ್ಧಾರೆ.

ರಾಯಚೂರಿನಲ್ಲಿ ಇಲ್ಲಿಯವರೆಗೂ 378 ಜನರಿಗೆ ಕೊರೋನಾ ಬಂದಿದೆ. ಇದರಲ್ಲಿ 4 ಮಂದಿ ಪೊಲೀಸರು ಮತ್ತು ಓರ್ವ ಆಶಾ ಕಾರ್ಯಕರ್ತೆಯೊಂದಿಗೆ ಪೋಸ್ಟ್​ ಮ್ಯಾನ್​ ಕೂಡ ಇದ್ದಾರೆ. ಈ ನಡುವೆಯೇ ಕೋವಿಡ್​​-19 ಆಸ್ಪತ್ರೆಯಲ್ಲಿ ಕೆಲಸ ಮಾಡುವ 8 ಮಂದಿ ಕೊರೋನಾ ವಾರಿಯರ್ಸ್​ಗೆ ಸೋಂಕು ತಗುಲಿದೆ.

ಇನ್ನು, 8 ಮಂದಿಗೆ ಪ್ರತ್ಯೇಕ ಕೊಠಡಿಗಳಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದ ರಿಮ್ಸ್ ಆಸ್ಪತ್ರೆಗೆ ಬಂದೋಗುವ ಎಲ್ಲರಿಗೂ ಭೀತಿ ಶುರುವಾಗಿದೆ. ರಾಯಚೂರಿಗೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ಸಚಿವರಿಗೂ ಈ ಭಯ ಕಾಡಿದೆ ಎಂದು ಹೇಳಲಾಗುತ್ತಿದೆ.

ಹೀಗಾಗಿಯೇ ವೈದ್ಯಕೀಯ ಶಿಕ್ಷಣ ಸಚಿವ ತಮ್ಮ ಪ್ರೀಪ್ಲಾನ್ಡ್​ ರಿಮ್ಸ್ ಭೇಟಿ ಕಾರ್ಯಕ್ರಮ ರದ್ದು ಮಾಡಿದ್ದರು. ಇಲ್ಲಿ ನಡೆಸಬೇಕಾದ ಸಭೆಯನ್ನು ಸರ್ಕ್ಯೂಟ್ ಹೌಸ್​ನಲ್ಲಿ ನಡೆಸಿದರು. ಜತೆಗೆ ರಿಮ್ಸ್​ ಆಸ್ಪತ್ರೆ ಸಿಬ್ಬಂದಿ ವೇತನ ಸಮಸ್ಯೆ ಆಲಿಸಿದ ಸಚಿವರು, ಸದ್ಯದಲ್ಲೇ ಬಗೆಹರಿಸುವ ಭರವಸೆ ನೀಡಿದರು.

Comments are closed.